ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು, ಮಗುವನ್ನು ತಲೆಕೆಳಗಾಗಿ ನೇತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ ನೇತು ಹಾಕಿದ್ದಾರೆ. ಬಾಲಕ ನೇತಾಡುವ ಫೋಟೋಗಳು ವೈರಲ್ ಆಗಿವೆ.
ʼವರ್ಕ್ ಫ್ರಮ್ ಹೋಂʼ ವೇಳೆ ನಡೆದ ತಮಾಷೆ ಸಂಗತಿಯನ್ನು ಹಂಚಿಕೊಂಡ ಗೂಗಲ್ ಸಿಇಒ
ಜಿಲ್ಲಾಧಿಕಾರಿ ಪ್ರವೀಣ್‌ಕುಮಾರ್, ತನಿಖೆಗೆ ಆದೇಶ ನೀಡಿದ್ದಾರೆ. ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಹ್ರೌರಾದ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜೂನಿಯರ್ ಹೈಸ್ಕೂಲ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ.
ಶಾಲೆಯ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಈ ಕೃತ್ಯ ಮಾಡಿದ್ದಾರೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಊಟ ಮಾಡುವಾಗ ಚೇಷ್ಟೆ ಮಾಡಿದ್ದನಂತೆ. ಕೋಪದ ಭರದಲ್ಲಿ ಮಗುವನ್ನು ಎಳೆದುಕೊಂಡು ಹೋಗಿ ನೇತು ಹಾಕಿದ್ದಾನೆ. ಬಾಲಕ ಕ್ಷಮೆ ಕೇಳಿದ ನಂತ್ರ ರಕ್ಷಿಸಿದ್ದಾನೆ.
ನನ್ನ ಮಗ ಇತರ ಮಕ್ಕಳೊಂದಿಗೆ ಸ್ವಲ್ಪ ಚೇಷ್ಟೆ ಮಾಡಿದ್ದ. ಇದಕ್ಕಾಗಿ ಪ್ರಾಂಶುಪಾಲರು ನನ್ನ ಮಗನ ಪ್ರಾಣಕ್ಕೆ ಅಪಾಯ ತಂದೊಡ್ಡುವಂತಹ ಶಿಕ್ಷೆ ನೀಡಿದ್ದಾರೆ ಎಂದು ಸೋನು ತಂದೆ ರಂಜಿತ್ ಯಾದವ್ ಆರೋಪಿಸಿದ್ದಾರೆ.