ಚುನಾವಣೆ ಗೆದ್ದ ಮದದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿಯ ನಾಯಕಿ ಸಯಿದಾ ಖತೂನ್ ಹಾಗೂ 250 ಇತರ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ದೊಮಾರಿಯಾಗಂಜ್ ಪ್ರದೇಶದಲ್ಲಿ ಎಸ್.ಪಿ. ಪಕ್ಷದ ಗೆಲುವು ಆಚರಿಸುವ ಸಂದರ್ಭದಲ್ಲಿ ’ಪಾಕಿಸ್ತಾನ್ ಜಿಂದಾಬಾದ್, ಇಸ್ಲಾಂ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಎಂಬ ಆರೋಪದ ಮೇಲೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾರೆಟ್ ಸೇವಿಸಿ ʼಕೊಲೆಸ್ಟ್ರಾಲ್ ʼಮಟ್ಟ ಕಡಿಮೆ ಮಾಡಿಕೊಳ್ಳಿ
ಘಟನೆಯ ವಿಡಿಯೋ ವೈರಲ್ ಆಗುತ್ತಲೇ ಪ್ರಕರಣ ದಾಖಲಿಸಿದ್ದಾಗಿ ಸರ್ಕಲ್ ಅಧಿಕಾರಿ ಅಜಯ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ವಿಡಿಯೋವನ್ನು ಇನ್ನಷ್ಟು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಈ ಘೋಷಣೆಗಳನ್ನು ಕೂಗಿದ ಮಂದಿಯನ್ನು ಗುರುತಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ, ಸಾಯಿದಾ ಖತೂನ್ ಅವರು ಸಿದ್ಧಾರ್ಥನಗರ ಜಿಲ್ಲೆಯ ದೊಮಾರಿಯಾಗಂಜ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಘವೇಂದ್ರ ಪ್ರತಾಪ್ ಸಿಂಗ್‌ರನ್ನು 771 ಮತಗಳಿಂದ ಮಣಿಸಿದ್ದಾರೆ.