ಲಖ್ನೋ: ಉತ್ತರಪ್ರದೇಶದಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಕಾರ್ ಮೇಲೆ ಗುಂಡಿನದಾಳಿ ನಡೆಸಲಾಗಿದೆ.
ಓವೈಸಿ ಕಾರ್ ನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ದುಷ್ಕರ್ಮಿಗಳು ನಾಲ್ಕು ಸುತ್ತು ಫೈರಿಂಗ್ ಮಾಡಿದ್ದಾರೆ. ಮೀರತ್ ಟೋಲ್ ಬಳಿ ಗುಂಡಿನ ದಾಳಿ ನಡೆಸಲಾಗಿದೆ. ಮೂರ್ನಾಲ್ಕು ಮಂದಿ ಇದ್ದ ದುಷ್ಕರ್ಮಿಗಳು ಕಾರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಓವೈಸಿ ದಾಳಿಗೊಳಗಾದ ಕಾರ್ ಫೋಟೊ ಬಿಡುಗಡೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಯಾವುದೇ ಅಪಾಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಓವೈಸಿ ಇಂದು ಮೀರತ್ ನ ಕಿಥೌರ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದಾಗ ಛಜರ್ಸಿ ಟೋಲ್ ಪ್ಲಾಜಾ ಬಳಿ ತಮ್ಮ ವಾಹನದ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಕೆಲ ಸಮಯದ ಹಿಂದೆ ಛಿಜರ್ಸಿ ಟೋಲ್ ಗೇಟ್ ಬಳಿ ನನ್ನ ಕಾರ್ ಗೆ ಗುಂಡು ಹಾರಿಸಲಾಗಿದೆ. 4 ಸುತ್ತು ಗುಂಡು ಹಾರಿಸಲಾಗಿದೆ. ಅಲ್ಲಿ 3-4 ಜನ ಇದ್ದರು, ಎಲ್ಲರೂ ಓಡಿ ಹೋಗಿದ್ದು, ಆಯುಧಗಳನ್ನು ಅಲ್ಲೇ ಬಿಟ್ಟು ಹೋದರು. ನನ್ನ ಕಾರ್ ಪಂಕ್ಚರ್ ಆಯಿತು, ಆದರೆ ನಾನು ಇನ್ನೊಂದು ಕಾರ್ ನಲ್ಲಿ ಇಳಿದು ಹೊರಟೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಓವೈಸಿ ಮಾಹಿತಿ ನೀಡಿದ್ದಾರೆ.