alex Certify ಬಿಜೆಪಿ ಶಾಸಕನನ್ನು ಅಟ್ಟಾಡಿಸಿ ಓಡಿಸಿದ ಜನ, ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಶಾಸಕನನ್ನು ಅಟ್ಟಾಡಿಸಿ ಓಡಿಸಿದ ಜನ, ಕಾರಣ ಗೊತ್ತಾ…?

ನವದೆಹಲಿ: ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ಶಾಸಕನನ್ನು ಅಲ್ಲಿನ ನಿವಾಸಿಗಳು ಓಡಿಸಿದ್ದಾರೆ.

ಖತೌಲಿ ಕ್ಷೇತ್ರದ ಶಾಸಕರಾದ ವಿಕ್ರಮ್ ಸಿಂಗ್ ಸೈನಿ ಅವರ ವಿರುದ್ಧ ಗ್ರಾಮಸ್ಥರು ಘೋಷಣೆ ಕೂಗಿ ಓಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡಿದೆ. ಯುಪಿಯಲ್ಲಿ ಫೆಬ್ರವರಿ 10 ರಂದು ಅಸೆಂಬ್ಲಿ ಚುನಾವಣೆಗಳು ಪ್ರಾರಂಭವಾಗಲಿದ್ದು ಮಾರ್ಚ್ 10 ರಂದು ಫಲಿತಾಂಶಗಳು ಪ್ರಕಟವಾಗಲಿವೆ.

ಅಂದ ಹಾಗೇ, ಜನರ ಅಸಮಾಧಾನಕ್ಕೆ ಕಾರಣವೆಂದರೆ ಶಾಸಕರ ಪಕ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪರಿಚಯಿಸಿದ್ದು, ದೇಶಾದ್ಯಂತ ಒಂದು ವರ್ಷ ಹೋರಾಟ ನಡೆದು, 700 ಕ್ಕೂ ಅಧಿಕ ರೈತರು ಮೃತಪಟ್ಟ ನಂತರ ಕಾಯ್ದೆ ರದ್ದುಗೊಳಿಸಲಾಯಿತು. ಹೀಗಾಗಿ ಶಾಸಕರು ಬಂದಾಗ ಜನ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಓಡಿಸಿದ್ದಾರೆ. ಈ ವೇಳೆ ಕೆಲವು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.

ಸೈನಿ ವಿವಾದ ಹೊಸದೇನಲ್ಲ, ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ಅವರು ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ಓದಿದ ನಂತರದ ದಿನಗಳಲ್ಲಿ, ಬಿಜೆಪಿ ಕಾರ್ಯಕರ್ತರು ಈಗ ಕಾಶ್ಮೀರದ ಹುಡುಗಿಯರನ್ನು ಮದುವೆಯಾಗಬಹುದಾಗಿದೆ. ಇಂತಹ ಬದಲಾವಣೆಯಿಂದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದು ಸೈನಿ ಹೇಳಿದ್ದರು.

ಜನವರಿ, 2019 ರಲ್ಲಿ, ಭಾರತದಲ್ಲಿ ಅಸುರಕ್ಷಿತ ಎಂದು ಭಾವಿಸುವವರಿಗೆ ಮತ್ತು ದೇಶಕ್ಕೆ ನಿಷ್ಠರಾಗಿಲ್ಲದವರಿಗೆ ಬಾಂಬ್ ಹಾಕುವುದಾಗಿ ಸೈನಿ ಬೆದರಿಕೆ ಹಾಕಿದ್ದರು.

2018 ರ ಜನವರಿಯಲ್ಲಿ ಹೆಸರೇ ಸೂಚಿಸುವಂತೆ ‘ಹಿಂದೂಸ್ತಾನ್’ ಹಿಂದೂಗಳಿಗೆ ಸೇರಿದೆ ಎಂದು ಸೈನಿ ಹೇಳಿದ್ದರಲ್ಲದೇ, ದೇಶದ ಮುಸ್ಲಿಂ ಜನಸಂಖ್ಯೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರು.

2017ರ ಮಾರ್ಚ್‌ನಲ್ಲಿ ದೇಶದಲ್ಲಿ ಗೋವುಗಳಿಗೆ ಅಗೌರವ ತೋರುವ ಮತ್ತು ಕೊಲ್ಲುವವರ ಕೈಕಾಲುಗಳನ್ನು ಮುರಿಯುವುದಾಗಿ ಹೇಳಿಕೆ ನೀಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...