ಯುಪಿ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಾರು 25 ಪ್ರತಿಶತ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ವರದಿಯಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿದ ವಿಶ್ಲೇಷಣೆಯ ಪ್ರಕಾರ, ಅದು 586 ಅಭ್ಯರ್ಥಿಗಳಲ್ಲಿ 584 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ಇದರಲ್ಲಿ 25% ಅಭ್ಯರ್ಥಿಗಳ ಮೇಲೆ ಸುಮಾರು 147 ಕ್ರಿಮಿನಲ್ ಪ್ರಕರಣಗಳಿವೆ ಎಂದು ಬಹಿರಂಗಪಡಿಸಿದೆ.
ಪ್ರಮುಖ ಪಕ್ಷಗಳ ಪೈಕಿ, ಎಸ್‌ಪಿಯ 52 ಅಭ್ಯರ್ಥಿಗಳಲ್ಲಿ 35, ಕಾಂಗ್ರೆಸ್‌ನ 54 ಅಭ್ಯರ್ಥಿಗಳಲ್ಲಿ 23, ಬಿಎಸ್‌ಪಿ ಯ 55 ಅಭ್ಯರ್ಥಿಗಳಲ್ಲಿ 20, ಬಿಜೆಪಿಯ 53 ಅಭ್ಯರ್ಥಿಗಳಲ್ಲಿ 18, ಆರ್‌ಎಲ್‌ಡಿಯ 3 ಅಭ್ಯರ್ಥಿಗಳಲ್ಲಿ 1 ಮತ್ತು ಎಎಪಿಯ 49 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ಅವರೇ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದನ್ನ ಘೋಷಿಸಿದ್ದಾರೆ.
ಮತ್ತೊಮ್ಮೆ ʼಮಾನವೀಯತೆʼ ಮೆರೆದು ಎಲ್ಲರ ಹೃದಯ ಗೆದ್ದ ಸೋನು ಸೂದ್
ಎಸ್‌ಪಿಯ 52 ಅಭ್ಯರ್ಥಿಗಳಲ್ಲಿ 25, ಕಾಂಗ್ರೆಸ್‌ನ 54 ಅಭ್ಯರ್ಥಿಗಳಲ್ಲಿ 16, ಬಿಎಸ್‌ಪಿಯ 55 ಅಭ್ಯರ್ಥಿಗಳಲ್ಲಿ 15, ಬಿಜೆಪಿಯ 53 ಅಭ್ಯರ್ಥಿಗಳಲ್ಲಿ 11, ಆರ್‌ಎಲ್‌ಡಿಯ 3 ಅಭ್ಯರ್ಥಿಗಳಲ್ಲಿ 1 ಮತ್ತು ಎಎಪಿಯ 49 ಅಭ್ಯರ್ಥಿಗಳಲ್ಲಿ 6 ಜನರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ.
ಎಎಪಿಯಿಂದ ವಿಶ್ಲೇಷಿಸಲಾದ 49 ಅಭ್ಯರ್ಥಿಗಳಲ್ಲಿ, ಆರು ಜನ ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಒಬ್ಬ ಅಭ್ಯರ್ಥಿಯು ಕೊಲೆಗೆ ಸಂಬಂಧಿಸಿದ ಪ್ರಕರಣವನ್ನು ಹೊಂದಿದ್ದಾರೆ. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 55 ಕ್ಷೇತ್ರಗಳ ಪೈಕಿ ಸುಮಾರು 29 ಕ್ಷೇತ್ರಗಳು ಕ್ರಿಮಿನಲ್ ಅಭ್ಯರ್ಥಿಗಳ ಉಪಸ್ಥಿತಿಯಿಂದಾಗಿ ‘ರೆಡ್ ಅಲರ್ಟ್’ ಕ್ಷೇತ್ರಗಳಾಗಿ ಮಾರ್ಪಾಡಾಗಿವೆ.