
ನಾವು ಅಗ್ನಿಶಾಮಕ ದಳ ಹಾಗೂ ಲ್ನೋ ಮೃಗಾಲಯ ಮೀಸಲು ಪೊಲೀಸರ ಸಮೇತ ರಕ್ಷಣಾ ಸ್ಥಳಕ್ಕೆ ಧಾವಿಸಿದೆವು. ಈ ತಂಡವು ಗಾಳಿಪಟದ ದಾರವನ್ನು ಕತ್ತರಿಸುವ ಮೂಲಕ ಕೋಗಿಲೆಯನ್ನು ಬಂಧಮುಕ್ತ ಮಾಡುವಲ್ಲಿ ಯಶಸ್ವಿಯಾಯ್ತು. ಪಕ್ಷಿಗೆ ಗಾಯವಾಗಿದೆ ಹೀಗಾಗಿ ಲಕ್ನೋ ಮೃಗಾಲಯದ ವೈದ್ಯಕೀಯ ತಂಡವು ಪಕ್ಷಿಗೆ ಚಿಕಿತ್ಸೆ ನೀಡಿದೆ ಎಂದು ಹೇಳಿದ್ರು.
ವನ್ಯಜೀವಿ ಪ್ರಿಯ ಚಿರಂಜೀವಿ ನಾಥ್ರನ್ನು ಈ ವರ್ಷದ ಆರಂಭದಲ್ಲಿ ಲಕ್ನೋ ಮೃಗಾಲಯದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಇವರು ಲಾಕ್ಡೌನ್ ಸಮಯದಲ್ಲಿ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಹಾಗೂ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಜನರನ್ನು ಉತ್ತೇಜಿಸುವ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.