ಅರಣ್ಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಉತ್ತರ ಪ್ರದೇಶದಲ್ಲಿ ಕೇವಲ ಒಂದು ದಿನದ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 25.5 ಕೋಟಿ ಗಿಡಗಳನ್ನ ನೆಡಲಾಗಿದೆ.
ಜುಲೈ ತಿಂಗಳಲ್ಲಿ ಒಟ್ಟು 30 ಕೋಟಿ ಗಿಡಗಳನ್ನ ರಾಜ್ಯಾದ್ಯಂತ ನೆಡಬೇಕು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ಆಶ್ಚರ್ಯ ಎಂಬಂತೆ ಭಾನುವಾರ ಒಂದೇ ದಿನ ಉತ್ತರ ಪ್ರದೇಶದಲ್ಲಿ 25.5 ಕೋಟಿ ಗಿಡಗಳನ್ನ ನೆಡಲಾಗಿದೆ. ಇನ್ನುಳಿದ 5 ಕೋಟಿ ಗಿಡಗಳನ್ನೂ ಇದೇ ತಿಂಗಳಲ್ಲೇ ನೆಡಲಾಗುತ್ತದೆ.
GOOD NEWS: ದ್ವಿತೀಯ ಪಿಯು ರಿಪೀಟರ್ಸ್ ಗೆ ಬಂಪರ್ – ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಲು ಸರ್ಕಾರದ ಸಮ್ಮತಿ
ಕೋವಿಡ್ 19ನಲ್ಲಿ ಮೃತರಾದವರ ಸವಿನೆನಪಿಗಾಗಿ ಗಿಡ ನೆಡುವ ಈ ಸ್ಮೃತಿ ವಾಟಿಕಾ ಕಾರ್ಯಕ್ರಮದಲ್ಲಿ ಭಾಗಿಯಾದ ರಾಜ್ಯಪಾಲೆ ಆನಂದಿ ಬೆನ್ ಕೂಡ ಝಾನ್ಸಿಯಲ್ಲಿ ಗಿಡ ನೆಟ್ಟಿದ್ದಾರೆ. ಇತ್ತ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸುಲ್ತಾನ್ಪುರದಲ್ಲಿ ಗಿಡ ನೆಡುವ ಮೂಲಕ ಕೋವಿಡ್ನಿಂದ ಮಡಿದವರನ್ನ ಸ್ಮರಿಸಿದ್ರು.
ಜನರಲ್ಲಿ ಸಸಿ ನೆಟ್ಟು ಅದನ್ನ ಪೋಷಿಸಲು ಉತ್ತೇಜನ ನೀಡುವ ಸಲುವಾಗಿ ಸರ್ಕಾರವು ಸ್ಪರ್ಧೆಯನ್ನ ಆಯೋಜಿಸಿದ್ದು ವಿಜೇತರಿಗೆ ಸೂಕ್ತ ಬಹುಮಾನ ನೀಡೋದಾಗಿಯೂ ಹೇಳಿದೆ. ಇದಕ್ಕಾಗಿ ಸ್ಪರ್ಧಿಗಳು ಕಾಲ ಕಾಲಕ್ಕೆ ಅರಣ್ಯ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಗಿಡಗಳ ಫೋಟೋವನ್ನ ಅಪ್ಲೋಡ್ ಮಾಡುತ್ತಿರಬೇಕು.