
ಲಖ್ನೋ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿಗೆ ಉತ್ತರಪ್ರದೇಶದ ಪಂಚಾಯಿತಿ ಚುನಾವಣೆಯಲ್ಲಿಯೂ ಭಾರಿ ಮುಖಭಂಗವಾಗಿದೆ.
ಪ್ರಧಾನಿ ಮೋದಿಯವರ ಕ್ಷೇತ್ರದಲ್ಲಿ ಪಕ್ಷ ಸೋಲು ಕಂಡಿದೆ. ವಾರಣಾಸಿ ಮತ್ತು ಲಖ್ನೋ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಆಡಳಿತರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಬಹುತೇಕ ಕಡೆ ಸಮಾಜವಾದಿ ಪಕ್ಷ ಜಯಭೇರಿ ಬಾರಿಸಿದೆ.
ಮೋದಿ ಪ್ರತಿನಿಧಿಸುವ ವಾರಣಾಸಿಯ 40 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಜಯ ಗಳಿಸಿದೆ. ಸಮಾಜವಾದಿಪಕ್ಷ 14. ಬಹುಜನ ಸಮಾಜ ಪಕ್ಷ 5. ಅಪ್ನಾ ದಳ 3, ಆಮ್ ಆದ್ಮಿ ಹಾಗೂ ಇತರರು ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಇವರೊಂದಿಗೆ ಮೂವರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಲಖ್ನೋದಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯ ಗಳಿಸಿದೆ. ಅಯೋಧ್ಯೆಯಲ್ಲಿ 40 ಸ್ಥಾನಗಳಲ್ಲಿ ಬಿಜೆಪಿ ಕೇವಲ 6 ರಲ್ಲಿ ಜಯಗಳಿಸಿದ್ದು 24 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಜಯಭೇರಿ ಬಾರಿಸಿದೆ.