ಶಹಜಹಾನ್‌ಪುರ: ರಸ್ತೆ ವಿಸ್ತರಣೆಗಾಗಿ ಹನುಮಂತ ದೇವಾಲಯವನ್ನು ಕೆಡುವವ ಪರಿಸ್ಥಿತಿ ಬಂದಾಗ, ಅದು ಅಪವಿತ್ರ ಎನ್ನುವ ಕಾರಣಕ್ಕೆ ದೇವಾಲಯವನ್ನೇ 67 ಅಡಿ ಸ್ಥಳಾಂತರ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
250 ಜಾಕ್‌ಗಳ ಸಹಾಯದಿಂದ ಹನುಮಾನ್ ದೇವಾಲಯವನ್ನು 67 ಅಡಿ ಎತ್ತರಿಸಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ದೇವಾಲಯವನ್ನು ಒಡೆಯುವುದನ್ನು ಅಪವಿತ್ರವೆಂದು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಶಹಜಹಾನ್‌ಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಕಚ್ಚಿಯಾನಿ ಖೇಡದಲ್ಲಿರುವ ಹನುಮಾನ್ ದೇಗುಲವನ್ನು ಸ್ಥಳಾಂತರಗೊಳಿಸಲಾಗಿದೆ.
ಮಂಗಳವಾರ ಸಂಜೆ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸ್ಥಳಾಂತರ ಕಾರ್ಯ ಆರಂಭವಾಯಿತು. ಈ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. 250 ಜಾಕ್‌ಗಳ ಸಹಾಯದಿಂದ, ಇಡೀ ದೇವಾಲಯವನ್ನು ಮಧ್ಯಾಹ್ನದ ವೇಳೆಗೆ ಮೇಲಕ್ಕೆತ್ತಲಾಯಿತು ಮತ್ತು ಸಂಜೆಯ ಹೊತ್ತಿಗೆ ಅದನ್ನು ರಸ್ತೆಯಿಂದ ಒಂದು ಅಡಿ ಹಿಂದಕ್ಕೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.