ಅಮಾನ್ಯೀಕರಣಗೊಂಡಿರುವ 500 ರೂಪಾಯಿ ಮುಖಬೆಲೆಯ ಕೆಲ ನೋಟುಗಳು ಸೇರಿದಂತೆ ವಿವಿಧ ನೋಟುಗಳು ಮರದ ಕೊಂಬೆಗಳಿಂದ ಉದುರಿದ ವಿಚಿತ್ರ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದಹಾಗೆ ಈ ನೋಟುಗಳನ್ನು ಮರದ ಮೇಲೆ ಕೂತ ಕೋತಿಯೊಂದು ಉದುರಿಸಿದೆ.
30 ನಿಮಿಷಗಳ ಡ್ರಾಮಾದ ಬಳಿಕ 95000 ರೂಪಾಯಿ ನಗದನ್ನು ನೋಟುಗಳ ಮಾಲೀಕರಾದ ವಕೀಲರಿಗೆ ನೀಡಲಾಗಿದೆ. ಆದರೂ 5000 ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಪತ್ತೆಯಾಗಿಲ್ಲ.
ಭೂ ನೋಂದಣಿ ಸ್ಟಾಂಪ್ ಪೇಪರ್ ಖರೀದಿಗಾಗಿ ವಿನೋದ್ ಕುಮಾರ್ ಶರ್ಮಾ 2 ಲಕ್ಷ ರೂಪಾಯಿ ನಗದನ್ನು ಹೊಂದಿದ ಬ್ಯಾಗ್ನ್ನು ಹೊತ್ತುಕೊಂಡು ಹೊರಟಿದ್ದರು.
ತಡರಾತ್ರಿ ರೇವ್ ಪಾರ್ಟಿ: ದಾಳಿ ವೇಳೆ ಡ್ರಗ್ಸ್ ನಶೆಯಲ್ಲಿದ್ದವರು ಪರಾರಿ, ಕೆಲವರು ವಶಕ್ಕೆ
ಸ್ಥಳೀಯ ನ್ಯಾಯಾಲಯದ ಬಳಿ ನಿಂತಿದ್ದ ವೇಳೆ ಕೋತಿಯೊಂದು ವಕೀಲರ ಕೈಲಿದ್ದ ಬ್ಯಾಗ್ನ್ನು ಕಸಿದು ಮರ ಏರಿದೆ. 50000 ರೂಪಾಯಿ ನಗದು ಹೊಂದಿದ್ದ 2 ಬಂಡಲ್ಗಳನ್ನು ಎತ್ತಿಕೊಂಡ ಕೋತಿಯು ಬ್ಯಾಗ್ನ್ನು ಕೆಳಗೆ ಎಸೆದಿದೆ. ಬಳಿಕ ಈ ಹಣವನ್ನು ಮರದಿಂದ ಉದುರಿಸಲು ಆರಂಭಿಸಿದೆ. ಈ ವಿಚಿತ್ರ ಘಟನೆಯನ್ನು ನೋಡಲು ಸಾಕಷ್ಟು ಮಂದಿ ಮರದ ಕೆಳಕ್ಕೆ ಸೇರಿದ್ದರು. ಅನೇಕರು ಹಣವನ್ನು ಆಯ್ದುಕೊಂಡಿದ್ದಾರೆ.
ಶರ್ಮಾ ಕೋತಿಯ ಬಳಿ ಬೇಡಿಕೊಂಡಿದ್ದು ಮಾತ್ರವಲ್ಲದೇ ನೆರೆದಿದ್ದ ಜನರ ಬಳಿಯೂ ಹಣವನ್ನು ಎತ್ತಿಕೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ ಕೋತಿ ಮಾತ್ರ ಕೈಯಲ್ಲಿ ಹಣವನ್ನ ಹಿಡಿದು ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಜಿಗಿಯುತ್ತಲೇ ಇತ್ತು.