ಪಾಟ್ನಾ: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು 50,000 ರೂ.ಗೆ ಮಹಿಳಾ ಪಿಂಪ್ ಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಮಹಿಳಾ ಪಿಂಪ್ ಗೆ ಮಾರಾಟ ಮಾಡುವ ಮೊದಲು ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಉತ್ತರ ಪ್ರದೇಶದ ಮೌ ಜಿಲ್ಲೆಯ ಪೊಲೀಸರ ತಂಡ ಸೋನಿ ದೇವಿ ಎಂದು ಗುರುತಿಸಲಾದ ಮಹಿಳಾ ಪಿಂಪ್ ಬಂಧಿಸಿ ಬಾಲಕಿಯನ್ನು ರಕ್ಷಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ.
ಬಂಧಿತರನ್ನು ಮಧುಬನಿ ಜಿಲ್ಲೆಯ ಜೈನಗರದಲ್ಲಿರುವ ಅಶೋಕ್ ಮಾರ್ಕೆಟ್ ನ ನೈಟ್ ಗಾರ್ಡ್ ಸೋನಿ ದೇವಿ, ಅರ್ಜುನ್ ಯಾದವ್ ಮತ್ತು ಎಲೆಕ್ಟ್ರಿಷಿಯನ್ ಸಜನ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸ್ ಚಾಲಕ ಆಚಾರ್ಯ ಮತ್ತು ಜೈನಗರ ಪೊಲೀಸ್ ಠಾಣೆಯ ಚೋಕಿದಾರ್ ರಾಮಜೀವನ್ ಪಾಸ್ವಾನ್ ತಲೆಮರೆಸಿಕೊಂಡಿದ್ದಾರೆ.
ಒಂದು ತಿಂಗಳ ಹಿಂದೆ, ಸಂತ್ರಸ್ತೆ ಉತ್ತರ ಪ್ರದೇಶದ ತನ್ನ ತವರು ಮೌ ತೊರೆದು ಬಿಹಾರದ ಮಧುಬನಿ ಜಿಲ್ಲೆಯ ಜೈನಗರ ಪಟ್ಟಣ ತಲುಪಿದ್ದಳು. ಜೈನಗರದ ಅಶೋಕ್ ಮಾರ್ಕೆಟ್ ನಲ್ಲಿ ತಿರುಗಾಡುತ್ತಿದ್ದ ಆಕೆ ಅರ್ಜುನ್ ಯಾದವ್ ನ ಸಹಾಯ ಕೇಳಿದ್ದು, ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ನಂತರ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿ ಸರದಿಯಲ್ಲಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಕೊಠಡಿಯೊಂದರಲ್ಲಿ ಬಂಧಿಸಿದ್ದರು.
ಅವರು ಪದೇ ಪದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರ ಇತರ ಸಹಚರರನ್ನು ಕೂಡ ಅತ್ಯಾಚಾರಕ್ಕೆ ಆಹ್ವಾನಿಸಿದ್ದಾರೆ. ಈ ನಡುವೆ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ಮೌ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ತನಿಖೆಯನ್ನು ಪ್ರಾರಂಭಿಸಲಾಯಿತು ಮತ್ತು ಮೌ ಪೊಲೀಸರ ತಂಡವು ಮಧುಬನಿಯ ಜೈನಗರ ಪಟ್ಟಣಕ್ಕೆ ತಲುಪಿ ಸೋನಿ ದೇವಿ ಅವರ ಮನೆಯಲ್ಲಿ ದಾಳಿ ನಡೆಸಿ ಬಾಲಕಿ ಪತ್ತೆ ಹಚ್ಚಿದರು. ತಕ್ಷಣ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ಪೊಲೀಸ್ ತಂಡ ಮಹಿಳಾ ಪಿಂಪ್ ಬಂಧಿಸಿದೆ. ಜೈನಗರ್ ಪೊಲೀಸ್ ಠಾಣೆಯ ಎಸ್ಹೆಚ್ಒ ಸಂಜಯ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.