
ವೈರಲ್ ವಿಡಿಯೋದಲ್ಲಿ ಕಂಡು ಬರುವಂತೆ ಉತ್ತರ ಪ್ರದೇಶದ ಮುಜಾಫರ್ ನಗರದ ರಸ್ತೆ ಬದಿಯ ಆಹಾರ ಮಳಿಗೆಯ ಬಳಿ ಬೈಕಿನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು, ಸಮೀಪ ನಿಂತಿದ್ದ ವ್ಯಕ್ತಿಯನ್ನು ಸಮೀಪಿಸಿ, ‘ಅಪಹರಣ’ ಮಾಡಲು ಪ್ರಯತ್ನಿಸಿದ್ದಾರೆ.
ಸಿನಿಮಾದಲ್ಲಿ ಕಂಡ ದೃಶ್ಯದಂತೆ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಗೊಂದಲವನ್ನು ಉಂಟುಮಾಡಿತು, ಅಲ್ಲದೇ ಅಪಹರಣವನ್ನು ನಿಜವೆಂದು ನಂಬಿ ಅಪಹರಣ ತಡೆಯಲು ಯತ್ನಿಸಿದ್ದಾರೆ, ಬಳಿಕ ಕ್ಯಾಮೆರಾದ ಕಡೆಗೆ ತೋರಿಸಿದಾಗ ಇದು ಕೇವಲ ಇನ್ಸ್ಟಾಗ್ರಾಮ್ ರೀಲ್ಗಳಿಗಾಗಿ ಚಿತ್ರೀಕರಿಸಲಾಗುತ್ತಿರುವ ‘ಅಪಹರಣ’ ಕೃತ್ಯ ಎಂದು ಅವರಿಗೆ ತಿಳಿಯುತ್ತದೆ.
ಖತೌಲಿ ಪ್ರದೇಶದಲ್ಲಿ ರೀಲ್ ಅನ್ನು ಚಿತ್ರೀಕರಿಸಲಾಗಿದ್ದು, ಅಲ್ಲಿ ಯುವಕರು ಸಾರ್ವಜನಿಕ ಸ್ಥಳದಲ್ಲಿ ಅಪಹರಣವನ್ನು ಚಿತ್ರೀಕರಿಸಲು ಪ್ರಯತ್ನಿಸಿದ್ದರು.
ಬೈಕ್ನಲ್ಲಿ ಬಂದ ಇಬ್ಬರು ಯುವಕರು ರಸ್ತೆ ಬದಿಯ ಫುಡ್ ಸ್ಟಾಲ್ ಬಳಿ ನಿಲ್ಲಿಸಿ, ಮತ್ತೊಬ್ಬ ವ್ಯಕ್ತಿಯನ್ನು ಅಪಹರಿಸಲು ಯತ್ನಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇದು ನಿಜವಾದ ಅಪಹರಣ ಎಂದು ಭಾವಿಸಿದ ಜನ ಬೈಕ್ ಸುತ್ತುವರೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಸ್ವಲ್ಪ ದೂರದಲ್ಲಿ ಇರಿಸಲಾಗಿದ್ದ ತಮ್ಮ ಕ್ಯಾಮೆರಾವನ್ನು ಯುವಕರು ಸ್ಥಳೀಯರಿಗೆ ತೋರಿಸಬೇಕಾಯಿತು. ಇದೀಗ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಫೇಕ್ ಕಿಡ್ನಾಪ್ ಮಾಡಿದ ಗುಲ್ಶರ್, ಮೋನಿಶ್, ಸಾದಿಕ್ ಮತ್ತು ಸಮದ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ.