
ಇಂಟರ್ನೆಟ್ನಲ್ಲಿ ಸಾಹಸಮಯ ವಿಡಿಯೋಗಳಿಗೆ ಏನೂ ಬರವಿಲ್ಲ. ಲೈಕ್ಸ್ ಹಾಗೂ ವೀವ್ಸ್ ಪಡೆಯುವ ಸಲುವಾಗಿ ಯುವ ಜನತೆ ಜೀವವನ್ನು ಅಪಾಯಕ್ಕೆ ದೂಡಲೂ ಸಹ ತಯಾರಿದೆ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶ ಪೊಲೀಸ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಸದ ಟ್ರಕ್ ಮೇಲೆ ಪುಶಪ್ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ ಯುವಕ ಸಾಹಸ ಮಾಡುತ್ತಿದ್ದ ಟ್ರಕ್ ನಿಂತುಕೊಂಡಿರಲಿಲ್ಲ. ಬದಲಾಗಿ ಅದು ಚಲಿಸುತ್ತಿತ್ತು. ಇದನ್ನು ನೋಡುವಾಗಲೇ ಅಪಾಯಕಾರಿ ಎಂದು ಎನಿಸಿದರೂ ಸಹ ಆತ ಮಾತ್ರ ಪುಶಪ್ಸ್ಗಳನ್ನು ಮಾಡುತ್ತಲೇ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದ್ದಾನೆ. ತನ್ನ ಸಾಹಸವನ್ನು ಪ್ರದರ್ಶಿಸಿದ ಬಳಿಕ ಅದನ್ನು ಎಂಜಾಯ್ ಮಾಡಲು ಚಲಿಸುತ್ತಿದ್ದ ವಾಹನದ ಮೇಲೆ ನಿಲ್ಲಲ್ಲು ಯತ್ನಿಸಿದ್ದಾನೆ.
ಕೆಲವೇ ಕೆಲವು ಸೆಕೆಂಡ್ಗಳಲ್ಲಿ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ವ್ಯಕ್ತಿಯು ಟ್ರಕ್ನಿಂದ ಸೀದಾ ರಸ್ತೆಗೆ ಬೀಳುತ್ತಾನೆ. ಇಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಆತನಿಗೆ ಅನೇಕ ಗಾಯಗಳಾಗಿದೆ. ಆತನಿಗೆ ಯಾವ ರೀತಿಯಲ್ಲಿ ಗಾಯವಾಗಿದೆ ಎಂದರೆ ಆತನಿಗೆ ಕೆಲವು ದಿನಗಳ ಕಾಲ ಕುಳಿತುಕೊಳ್ಳಲೂ ಸಹ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.