ಕೇವಲ ತರಕಾರಿ ಬೆಳೆಯುವ ಮೂಲಕ ವರ್ಷಕ್ಕೆ 70 ಲಕ್ಷ ರೂಪಾಯಿ ಗಳಿಸುವ ಉತ್ತರ ಪ್ರದೇಶದ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುಎನ್‌ಇಪಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೈಮ್ ಈ ಸಾಧನೆಯ ವಿಡಿಯೋ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಬರೇಲಿಯ ರಾಮ್‌ವೀರ್ ಸಿಂಗ್ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಮಣ್ಣು ಮತ್ತು ಯಾವುದೇ ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಬೆಳೆಯುತ್ತಿರುವ ವಿಡಿಯೋ ಇದಾಗಿದೆ. ಅವರು ಸ್ಟ್ರಾಬೆರಿ, ಹೂಕೋಸು, ಬೆಂಡೇಕಾಯಿ ಮತ್ತು ಇತರ ಅನೇಕ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಅವರ ಮೂರು ಅಂತಸ್ತಿನ ಮನೆಯಲ್ಲಿ 10 ಸಾವಿರಕ್ಕೂ ಅಧಿಕ ಗಿಡಗಳಿವೆ.
ರಾಮ್‌ವೀರ್ ಅವರು ವಿಂಪಾ ಆರ್ಗ್ಯಾನಿಕ್ ಮತ್ತು ಹೈಡ್ರೋಪೋನಿಕ್ಸ್ ಎಂಬ ಕಂಪೆನಿಯನ್ನು ಹೊಂದಿದ್ದಾರೆ. ಇದರಿಂದ ಅವರು ವರ್ಷಕ್ಕೆ 70 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಹೈಡ್ರೋಪೋನಿಕ್ಸ್ ಬಳಸಿ ಮಣ್ಣಿನ ಅಗತ್ಯವಿಲ್ಲ ಮತ್ತು 90% ರಷ್ಟು ನೀರನ್ನು ಉಳಿಸಬಹುದು ಎನ್ನುತ್ತಾರೆ ಅವರು. ಈ ವಿಡಿಯೋ ಇದಾಗಲೇ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದು, ರಾಮ್‌ವೀರ್ ಅವರಿಂದ ಹಲವಾರು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದ್ದಾರೆ.