alex Certify ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಮೀರತ್: ವ್ಯಕ್ತಿಯೊಂದಿಗೆ ಸಹೋದರಿ ಸಂಬಂಧ ಹೊಂದಿದ್ದಾಳೆಂದು ಕೋಪಗೊಂಡ ಸಹೋದರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

22 ವರ್ಷದ ಸಮ್ರೀನ್, ಮೃತಪಟ್ಟ ಯುವತಿ. ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಕೋಪಗೊಂಡ ಸಹೋದರ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ಸ್ವದೇಶಿ ನಿರ್ಮಿತ ಪಿಸ್ತೂಲ್ ಸಹಿತ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ಆರೀಶ್ ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಸ್ಥಳೀಯ ವ್ಯಕ್ತಿಯೊಂದಿಗೆ ಸಮ್ರೀನ್ ಸಂಬಂಧ ಹೊಂದಿದ್ದಳು. ಈ ವಿಷಯ ಕುಟುಂಬಕ್ಕೆ ತಿಳಿದಾಗ ಆತನಿಂದ ದೂರವಿರುವಂತೆ ಕುಟುಂಬ ತಿಳಿಸಿದೆ. ಆದರೂ ಸಮ್ರೀನ್ ಮನೆಯವರ ಮಾತನ್ನು ವಿರೋಧಿಸಿ ವ್ಯಕ್ತಿಯೊಂದಿಗೆ ದೂರವಾಣಿ ಮೂಲಕ ಮಾತನಾಡುವುದನ್ನು ಮುಂದುವರೆಸಿದ್ದಳು ಎಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಆರೀಶ್, ಮಲಗಿದ್ದ ಸಮ್ರೀನ್ ತಲೆಗೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಳು.

ಗುಂಡಿನ ಸದ್ದು ಕೇಳಿದ ಕೂಡಲೇ ಓಡಿ ಬಂದ ಮನೆಯವರಿಗೆ ಶಾಕ್ ಆಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮ್ರೀನ್ ಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...