ತನ್ನ ಮಾಜಿ ಪತ್ನಿಯೇ ಮಲತಾಯಿಯಾಗಿ ಬಂದಿದ್ದಲ್ಲದೇ, ಆಕೆಯಿಂದಲೇ ತನಗೊಬ್ಬ ಸಹೋದರ ಜನಿಸಿದ ವಿಚಿತ್ರ ವಾಸ್ತವವನ್ನು ಉತ್ತರ ಪ್ರದೇಶದ ಯುವಕನೊಬ್ಬ ಆರ್‌ಟಿಐ ಮೂಲಕ ಕಂಡುಕೊಂಡಿದ್ದಾನೆ.
ಇಲ್ಲಿನ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ತನ್ನ ತಂದೆಯಿಂದ ತನಗೆ ಬರುತ್ತಿದ್ದ ದುಡ್ಡಿನ ಸಹಾಯ ನಿಲ್ಲುತ್ತಲೇ ಜಿಲ್ಲಾ ಪಂಚಾಯಿತಿಗೆ ಆರ್‌ಟಿಐ ಸಲ್ಲಿಸಿದ ಈತನಿಗೆ ಮೇಲ್ಕಂಡ ವಿಷಯ ತಿಳಿದುಬಂದಿದೆ. 2016ರಲ್ಲಿ ಇನ್ನೂ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಮದುವೆಯಾಗಿದ್ದ ಮಗ, ಆರು ತಿಂಗಳ ಬಳಿಕ ತನ್ನ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾನೆ. ಎಷ್ಟು ಹೇಳಿದರೂ ಕೇಳದ ಆತನ ಮೊದಲ ಪತ್ನಿ, ತನ್ನ ಪತಿ ಕುಡುಕ ಎಂದು ದೂರಿ ವಿಚ್ಛೇದನ ಪಡೆದಿದ್ದಾಳೆ.
ಶಾಲಾ ದಾಖಲಾತಿ ಶುಲ್ಕ: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ
ತನ್ನ ಮಾಜಿ ಪತ್ನಿಯನ್ನು ತನ್ನ ತಂದೆಯೇ ಮದುವೆಯಾಗಿದ್ದಾನೆ ಎಂದು ಅರಿತ ಮಗ, ಇಲ್ಲಿನ ಬಿಸೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆ ಬೋಟ್ ಮುಳುಗಡೆ: ಮೀನುಗಾರ ನಾಪತ್ತೆ, ಮೂವರ ರಕ್ಷಣೆ
ಇದೇ ವೇಳೆ, ತಾನು ತನ್ನ ’ಹೊಸ ಪತಿ’ಯೊಂದಿಗೆ ಸಂತೋಷವಾಗಿದ್ದು, ಹಳೆಯ ಪತಿ ಬಳಿ ಬರಲಾರೆ ಎಂದು ವಿಚ್ಛೇದಿತ ಮಹಿಳೆ ಹೇಳಿದ್ದಾಳೆ.
“ಮೊದಲ ಮದುವೆಯ ಪ್ರಕರಣದಲ್ಲಿ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿದ್ದ ಕಾರಣ ನಮಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಸದ್ಯದ ಮಟ್ಟಿಗೆ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ. ಇಬ್ಬರೂ ಪಾರ್ಟಿಗಳಿಗೆ ಮುಂದಿನ ವಿಚಾರಣೆ ಸಂಬಂಧ ನೊಟೀಸ್ ಜಾರಿ ಮಾಡಲಾಗಿದೆ” ಎಂದು ವೃತ್ತಾಧಿಕಾರಿ ವಿನಯ್ ಚೌಹಾಣ್ ತಿಳಿಸಿದ್ದಾರೆ.