
ಇದೇ ಮಾತಿಗೆ ಪುಷ್ಠಿ ಎಂಬಂತೆ ಉತ್ತರ ಪ್ರದೇಶ ಭಾಡೋಧಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಗರ್ಲ್ಫ್ರೆಂಡ್ ಮೀಟ್ ಆಗೋಕೆ ಭರ್ಜರಿ ಪ್ಲಾನ್ನ್ನೇ ಮಾಡಿದ್ದಾನೆ. ತನ್ನ ಹುಡುಗಿ ಬೇರೆಯವನೊಂದಿಗೆ ವಿವಾಹವಾಗುತ್ತಿದ್ದ ಸಂದರ್ಭದಲ್ಲಿ ಈತ ಸ್ತ್ರೀ ಅವತಾರದಲ್ಲಿ ತಯಾರಾಗಿ ಗರ್ಲ್ಫ್ರೆಂಡ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.
ಇಷ್ಟೆಲ್ಲ ಪ್ಲಾನ್ ಮಾಡಿದ್ರೂ ಸಹ ಆತ ಸಿಕ್ಕಿಬಿದ್ದಿದ್ದು ಸ್ನೇಹಿತರ ಸಹಾಯದಿಂದ ಸ್ಥಳದಿಂದ ಕಾಲ್ಕಿಳೋದ್ರಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಆತ ಮದುವೆಗೆ ಈ ರೀತಿ ಬಂದಿದ್ದರ ಹಿಂದೆ ಉದ್ದೇಶ ಏನಿತ್ತು ಅನ್ನೋದು ತಿಳಿದುಬಂದಿಲ್ಲ.
ಕೆಂಪು ಬಣ್ಣದ ಸೀರೆ ಧರಿಸಿದ್ದ ಈತ ವಧುವಿನಂತೆ ತಯಾರಾಗಿದ್ದ. ಕೈಯಲ್ಲಿ ಸಣ್ಣ ಪರ್ಸ್ ಹಾಗೂ ಮಹಿಳೆಯರ ಚಪ್ಪಲಿಯನ್ನೇ ಧರಿಸಿದ್ದ. ಆದರೂ ಸಹ ಈತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದದ್ದು ನೆರೆದವರ ಅನುಮಾನಕ್ಕೆ ಕಾರಣವಾಗಿದೆ.
ಈತ ಮದುವೆ ಮನೆಗೆ ಹೋಗಿ ಎಲ್ಲರ ಬಳಿ ನಾನು ವಧುವನ್ನ ಭೇಟಿಯಾಗಬೇಕೆಂದು ಹೇಳಿದ್ದನಂತೆ. ಇನ್ನು ಈ ಸಂಬಂಧ ಯಾರೂ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿಲ್ಲ.