
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ “ಸೇರಿಗೆ ಸವ್ವಾ ಸೇರು” ಎಂಬಂತಹ ವಿಲಕ್ಷಣ ಘಟನೆ ಇದು. ಲೈನ್‌ಮ್ಯಾನ್ ಒಬ್ಬಾತನ ಬೈಕ್‌ಗೆ ದಾಖಲೆ ಪತ್ರಗಳಲ್ಲಿ ಎಂದು ಪೊಲೀಸ್ ಅಧಿಕಾರಿ ದಂಡ ವಿಧಿಸಿದರು. ಇದಕ್ಕೆ ಪ್ರತಿಯಾಗಿ ಇದೇ ಲೈನ್‌ಮ್ಯಾನ್, ಪೊಲೀಸ್ ಠಾಣೆಗೆ ಮೀಟರ್ ಸಂಪರ್ಕವಿಲ್ಲ ಎಂದು ಪವರ್ ಕಟ್ ಮಾಡಿ ಸುದ್ದಿಯಾಗಿದ್ದಾರೆ. ಹರ್ದಾಸ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆಗೆ ವಿದ್ಯುತ್ ಇಲಾಖೆ ಆದೇಶ ನೀಡಿದೆ.
ಹರ್ದಾಸ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಶನಿವಾರ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಅದೇ ದಾರಿಯಲ್ಲಿ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಬೈಕ್ ಚಲಾಯಿಸಿಕೊಂಡು ಬಂದಿದ್ದರು. ಅವರ ಬೈಕ್ ಅನ್ನು ತಡೆದ ಮೋದಿ ಸಿಂಗ್, ಅಗತ್ಯ ದಾಖಲೆಗಳನ್ನು ತೋರಿಸಲು ಹೇಳಿದ್ದರು. ಈಗ ಇಲ್ಲ, ಮನೆಗೆ ಹೋಗಿ ತಂದು ತೋರಿಸುವೆ ಎಂದು ಭಗವಾನ್ ಮನವಿ ಮಾಡಿದ್ದರು.
‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು…?
ಆದರೆ, ಭಗವಾನ್ ಅವರ ಮನವಿಯನ್ನು ತಿರಸ್ಕರಿಸಿದ ಮೋದಿ ಸಿಂಗ್, 500 ರೂಪಾಯಿ ದಂಡ ಪಾವತಿಸುವಂತೆ ಚಲನ್ ನೀಡಿದ್ದರು. ಇದರಿಂದ ನೊಂದ ಭಗವಾನ್, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿವರ ನೀಡಿದ್ದ. ಅಲ್ಲದೆ, ಪೊಲೀಸ್ ಠಾಣೆಯ ಪವರ್ ಕಟ್ ಮಾಡುವಂತೆ ಕೇಳಿಕೊಂಡಿದ್ದ.
ಶನಿವಾರ ರಾತ್ರಿ ವಿದ್ಯುತ್ ಇಲಾಖೆ ಸಿಬ್ಬಂದಿ ಹರ್ದಾಸ್‌ಪುರ ಪೊಲೀಸ್ ಠಾಣೆಯ ಪವರ್ ಕಟ್ ಮಾಡಿದ್ದರು. ಏಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಕೇಳಿದಾಗ ಭಗವಾನ್ ಹೆಸರು ಪ್ರಸ್ತಾಪವಾಗಿದೆ. ಇದು ಸುದ್ದಿಯಾಗಿ, ಮಾಧ್ಯಮ ಪ್ರತಿನಿಧಿಗಳು ಭಗವಾನ್ ಅವರನ್ನು ಸಂಪರ್ಕಿಸಿದಾಗ ಇಡೀ ಘಟನಾವಳಿಗಳು ಬಹಿರಂಗವಾಗಿದೆ. ಅಲ್ಲದೆ, ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆತ, ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಮೀಟರ್ ಇರಲಿಲ್ಲ. ಹೀಗಾಗಿ ಅದು ಅಕ್ರಮ ವಿದ್ಯುತ್ ಸಂಪರ್ಕ ಎಂದು ಹೇಳಿದ್ದಾನೆ.