ಮುರಾದಾಬಾದ್: ವೆಬ್ ಸೀರೀಸ್ ನಿಂದ ಪ್ರೇರಿತನಾಗಿ ತನ್ನ ಸ್ನೇಹಿತನೊಂದಿಗೆ ಸೇರಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದಿರುವ ಘಟನೆ ಉತ್ತರಪ್ರದೇಶದ ಮುರಾದಾಬಾದ್ ನಲ್ಲಿ ನಡೆದಿದೆ.
ಅವರು ಲಿವ್-ಇನ್ ಸಂಬಂಧದಲ್ಲಿದ್ದರು. ಮೃತಳನ್ನು ಆಕಾಂಕ್ಷಾ ಎಂದು ಗುರುತಿಸಲಾಗಿದ್ದು, ಆರೋಪಿ ಪ್ರೇಮಿಯನ್ನು ಮೋಹಿತ್ ಸೈನಿ, ಆತನ ಸ್ನೇಹಿತ ಓಂಕಾರ್ ಶರ್ಮಾ ಕೃತ್ಯವೆಸಗಿದ್ದಾರೆ. ಆರೋಪಿಗಳಿಬ್ಬರನ್ನೂ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅವರು ಫುಟ್ಬಾಲ್ ಆಟಗಾರರಾಗಿದ್ದು, ನಿರ್ಜನ ಪ್ರದೇಶದಲ್ಲಿ ಕ್ಷೌರದ ರೇಜರ್‌ನಿಂದ ಆಕೆಯ ಕತ್ತು ಸೀಳಿ ಮಿರ್ಜಾಪುರ ವೆಬ್ ಸರಣಿ ಶೈಲಿಯಲ್ಲಿ ಕೊಂದಿದ್ದಾನೆ.
ಆಕಾಂಕ್ಷಾ ತನ್ನ ಮಾಜಿ ಪತಿ ಸದ್ದಾಂ ಜೊತೆಗೆ ಮತ್ತೆ ಆಸಕ್ತಿ ಬೆಳೆಸಿಕೊಂಡಿದ್ದೇ ಕೊಲೆಗೆ ಕಾರಣವೆಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
2023 ರಲ್ಲಿ ಆಕಾಂಕ್ಷಾ ಮತ್ತು ಆಕೆಯ ಪತಿ ಸದ್ದಾಂ ಅವರು ಬಾಡಿಗೆದಾರರಾಗಿ ಮೋಹಿತ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಆಕೆಯ ಪತಿ ಸದ್ದಾಂ ಕೆಲಸಕ್ಕೆ ಹೋಗುತ್ತಿದ್ದಾಗ ಆಕಾಂಕ್ಷಾ ಮತ್ತು ಮೋಹಿತ್ ಹತ್ತಿರವಾಗಿದ್ದರು. ಅವರ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ಸದ್ದಾಂ ಅವಳನ್ನು ತ್ಯಜಿಸಿದ್ದ. ಅವಳು ಮೋಹಿತ್ ಜೊತೆ ವಾಸಿಸಲು ಪ್ರಾರಂಭಿಸಿದ್ದಳು. ಇತ್ತೀಚೆಗಷ್ಟೇ ತನ್ನ ಮುರಿದುಬಿದ್ದ ದಾಂಪತ್ಯವನ್ನು ಸರಿಪಡಿಸಲು ಆರಂಭಿಸಿದ್ದಳು. ಇದನ್ನು ತಿಳಿದ ಮೋಹಿತ್ ಕೋಪದ ಭರದಲ್ಲಿ ವೆಬ್-ಸರಣಿ ಮಿರ್ಜಾಪುರದ ದೃಶ್ಯದಿಂದ ಪ್ರೇರಿತನಾಗಿ ಅವಳನ್ನು ಕೊಲ್ಲಲು ಯೋಜಿಸಿದ್ದ.
ಬುಧವಾರ ಆಕಾಂಕ್ಯಾ, ಮೋಹಿತ್ ಮತ್ತು ಆತನ ಸ್ನೇಹಿತ ಒಂದೆಡೆ ಭೇಟಿಯಾಗಿ ಮದ್ಯ ಸೇವಿಸಿದ್ದಾರೆ. ಬಳಿಕ ಮೂವರು ಬೈಕ್‌ನಲ್ಲಿ ಮನೆಯ ಕಡೆಗೆ ಹೊರಟಿದ್ದಾರೆ. ಯೋಜನೆಯಂತೆ ಮೋಹಿತ್ ವಾಹನವನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ. ಸ್ವಲ್ಪ ಸಮಯದ ನಂತರ ಅವನ ಸ್ನೇಹಿತ ಅವಳ ಕೈಗಳನ್ನು ಕಟ್ಟಿಹಾಕಿದ್ದಾನೆ. ಮೋಹಿತ್ ಶೇವಿಂಗ್ ರೇಜರ್ ಬಳಸಿ ಅವಳ ಕತ್ತು ಸೀಳಿದ್ದಾನೆ.