ಬರೇಲಿ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿವಾಹಿತ ಸಹೋದರಿ ಮೇಲೆ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯಗಳನ್ನು ಮದ್ಯ ಸೇವಿಸಿ ಆತನೊಂದಿಗೆ ಬಂದಿದ್ದ ಸ್ನೇಹಿತ ವಿಡಿಯೋ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಕಳೆದ ತಿಂಗಳು ಘಟನೆ ನಡೆದಿದೆ. ವಿಡಿಯೋ ಮಾಡಿಕೊಂಡಿದ್ದ ದುಷ್ಕರ್ಮಿ ಮಹಿಳೆಯನ್ನು ಬೆದರಿಸಿ ಕಿರುಕುಳ ನೀಡಲು ಆರಂಭಿಸಿದಾಗ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ. ಮೊದಲಿಗೆ ಈ ವಿಷಯ ತಿಳಿದಿದ್ದರೂ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹೇರಿದ್ದರು. ಆದರೆ, ಆರೋಪಿಯಿಂದ ಕಿರುಕುಳ ಹೆಚ್ಚಾದ ನಂತರ ಮಹಿಳೆ ಪೊಲೀಸರಿಗೆ ವಿಷಯ ತಿಳಿಸಿ ದೂರು ನೀಡಿದ್ದಾಳೆ.
ಡಿಸೆಂಬರ್ 23 ರಂದು ಸಹೋದರಿಯ ಮನೆಗೆ ಕೆಲಸದ ನೆಪದಲ್ಲಿ ಮದ್ಯ ಸೇವನೆ ಮಾಡಿ ಬಂದಿದ್ದ ಆರೋಪಿ ಒಳಗಿನಿಂದ ಬಾಗಿಲು ಹಾಕಿಕೊಂಡು ಅತ್ಯಾಚಾರ ಎಸಗಿದ್ದಾನೆ. ಆರೋಪಿಯ ಸ್ನೇಹಿತ ಅಶ್ಲೀಲ ಕೃತ್ಯದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದಾನೆ.
ನಂತರದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಮಹಿಳೆ ದೂರು ನೀಡದೇ ಪೋಷಕರು ಹೇಳಿದಂತೆ ಕೇಳಿದ್ದಾಳೆ. ಬಳಿಕ ಮನೆಯಿಂದ ಹೊರಗಿರುವ ಆರೋಪಿಯಿಂದ ಕಿರುಕುಳ ಹೆಚ್ಚಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೊರಾದಾಬಾದ್ ಸಿವಿಲ್ ಲೈನ್ಸ್ ಪೊಲೀಸ್ ಅಧಿಕಾರಿ ದರ್ವೇಶ್ ಕುಮಾರ್ ತಿಳಿಸಿದ್ದಾರೆ.