alex Certify ಹಣಕ್ಕಾಗಿ ಈತ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣಕ್ಕಾಗಿ ಈತ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ…..!

ಮನುಷ್ಯ ತನ್ನ ದುರಾಸೆಗಾಗಿ ಎಂತಹ ಹೀನ ಕೃತ್ಯ ಮಾಡುವುದಕ್ಕೂ ಹೇಸುವುದಿಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಮಹೋಬಾ ಆಸ್ಪತ್ರೆಯಲ್ಲಿ. ಆರೋಗ್ಯ ಕಾರ್ಯಕರ್ತನೊಬ್ಬ, ಲಂಚ ಪಡೆದು, ರೋಗಿಗೆ ರಕ್ತದ ಬದಲು ಕೆಂಪುಬಣ್ಣದ ಔಷಧಿಗೆ ಗ್ಲೂಕೋಸ್ ಬೆರಸಿ ಕೊಟ್ಟಿರೋ ಪ್ರಕರಣ ಬೆಳಕಿಗೆ ಬಂದಿದೆ.

ಮಹೋಬಾ ಸದರ್ ತಹಸಿಲ್ ಭಂಡಾರಾ ಗ್ರಾಮದಲ್ಲಿ 65 ವರ್ಷದ ರಾಮಕುಮಾರಿ ಇವರು ತಮ್ಮ ಮಗ ಜುಗಲ್‌ನನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಸ್ವಸ್ಥ ಜುಗಲ್‌ನನ್ನ ಪರೀಕ್ಷಿಸಿದ ವೈದ್ಯರು ದೇಹದಲ್ಲಿ ರಕ್ತ ಹೀನತೆ ಇದ್ದ ಕಾರಣ, ಪಕ್ಕದ ಬ್ಲಡ್‌ಬ್ಯಾಂಕ್‌ನಿಂದ ರಕ್ತವನ್ನ ಪಡೆದುಕೊಳ್ಳಲು ಸೂಚಿಸಿದ್ದಾರೆ. ವೈದ್ಯರು ಸೂಚಿಸಿದಂತೆ ಬ್ಲಡ್‌ಬ್ಯಾಂಕ್‌ಗೆ ಅಸ್ವಸ್ಥ ಮಗನನ್ನ ಕರೆದುಕೊಂಡು ರಾಜಕುಮಾರಿಯವರು ಹೋಗಿದ್ದಾರೆ. ಅಲ್ಲಿದ್ದ ಆರೋಗ್ಯ ಕಾರ್ಯಕರ್ತ ಬೇಕಾದ ರಕ್ತ ಪೂರೈಕೆಗಾಗಿ 5ಸಾವಿರ ರೂಪಾಯಿ ಲಂಚವನ್ನ ಕೇಳಿದ್ದಾನೆ.

ಓದು ಬರಹ ಗೊತ್ತಿಲ್ಲದ, ರಾಜಕುಮಾರಿಗೆ ಮಗ ಜುಗಲ್‌ನ ಸ್ಥಿತಿ ನೋಡೊಕ್ಕಾಗದೇ ತನ್ನ ಬಳಿ ಇರುವ ಆಭರಣವನ್ನ ಮಾರಿ 5 ಸಾವಿರ ರೂಪಾಯಿ ತಂದು ಆರೋಗ್ಯ ಕಾರ್ಯಕರ್ತನ ಕೈಗೆ ಕೊಟ್ಟಿದ್ದಾರೆ. ಆದರೆ ಆ ಪಾಪಿ ರಕ್ತದ ಬದಲು ಕೆಂಪುಬಣ್ಣದ ಔಷಧಿಯನ್ನೇ ರಕ್ತ ಅಂತ ಕೊಟ್ಟು ಅದರಲ್ಲಿ ಗ್ಲೂಕೋಸ್‌ ಬೆರೆಸಿದ್ದಾನೆ.

ಕೊನೆಗೆ ಅದನ್ನೇ ರಕ್ತ ಅಂತ ಜುಗಲ್‌ಗೆ ಕೊಡಲಾಗಿದೆ. ಆದರೆ ಯಾವಾಗ ರೋಗಿಗೆ ಇದನ್ನ ರಕ್ತ ಅಂತ ಕೊಡಲಾಯಿತೋ ಆತನ ಸ್ಥಿತಿ ಗಂಭೀರವಾಗಿದೆ. ಕೊನೆಗೆ ವೈದ್ಯರು ಬಂದು ಅದನ್ನ ಪರೀಕ್ಷೆ ಮಾಡಿದಾಗ ಗೊತ್ತಾಗಿದ್ದು, ಅದು ರಕ್ತ ಅಲ್ಲ, ಗ್ಲೂಕೇಸ್ ಬೆರೆಸಿದ ಕೆಂಪು ಬಣ್ಣದ ಔಷಧಿ ಅಂತ.

ಆಸ್ಪತ್ರೆಯವರು ಜುಗಲ್ ಅವರನ್ನ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಈಗ ಆರೋಗ್ಯ ಕಾರ್ಯಕರ್ತನ ವಿರುದ್ಧ ವಿಚಾರಣೆ ನಡೆಸಲಾಗಿದೆ.

ಜಿಲ್ಲಾಸ್ಪತ್ರೆಯ ಮುಖ್ಯ ಅಧಿಕ್ಷಕರಾಗಿರೋ ಡಾ.ಆರ್.ಪಿ. ಮಿಶ್ರಾ ಅವರು ಈ ಪ್ರಕರಣ ತನಿಖೆಗಾಗಿ ತಂಡವನ್ನ ರಚಿಸಲಾಗಿದೆ. ಅವರು ಈ ಪ್ರಕರಣವನ್ನ ಕೂಲಂಕೂಶವಾಗಿ ವಿಚಾರಣೆ ಮಾಡಿ ಆ ಆರೋಗ್ಯ ಕಾರ್ಯಕರ್ತನ ವಿರುದ್ಧ ಕ್ರಮ ಗೊಳ್ಳಲಾಗುವುದು ಅಂತ ಹೇಳಿದ್ಧಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...