ಲಖಿಂಪುರಖೇರಿ: ಉತ್ತರ ಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಪ್ರಾಂಶುಪಾಲ ಬೂಟಿನಿಂದ ಹೊಡೆದಿದ್ದಾನೆ.
ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಡವಾಗಿ ಬಂದಿದ್ದಕ್ಕೆ ಶಾಲೆಯ ಪ್ರಾಂಶುಪಾಲ ಶೂಗಳಿಂದ ಥಳಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಂಗು ಖೇರಾ ಶಾಲೆಯಲ್ಲಿ ಈ ಘಟನೆ ನಡೆದಿದೆ.
ವೈರಲ್ ವಿಡಿಯೊ ಆಧರಿಸಿ ಪ್ರಾಂಶುಪಾಲನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ(ಬಿಎಸ್‌ಎ) ಲಕ್ಷ್ಮೀಕಾಂತ್ ಪಾಂಡೆ ಹೇಳಿದ್ದಾರೆ.
ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಪ್ರಾಂಶುಪಾಲ ಅಜಿತ್ ವರ್ಮಾ ಶಿಕ್ಷಾ ಮಿತ್ರರಾಗಿರುವ ಶಿಕ್ಷಕಿಯನ್ನು ಥಳಿಸಿದ್ದಾರೆ. ಶಿಕ್ಷಕಿ ಖೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಿನ್ಸಿಪಾಲ್ ಅಜಿತ್ ವರ್ಮಾ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ.
ಶುಕ್ರವಾರವೂ ಶಿಕ್ಷಕಿ ಹಾಜರಾತಿ ಹಾಕಲು ಅಡ್ಡಗಾಲು ಹಾಕಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು. ಮಹಿಳಾ ಶಿಕ್ಷಕಿ ಮೊದಲು ಕೈ ಎತ್ತಿ ತನಗೆ ಥಳಿಸಲು ಪ್ರಯತ್ನಿಸಿದರು ಎಂದು ಅಜಿತ್ ಆರೋಪಿಸಿದ್ದಾರೆ.
https://twitter.com/ANINewsUP/status/1540304574757515265