
ಲಖ್ನೋ: ಶಾಲಾ ಮಕ್ಕಳ ಸಮವಸ್ತ್ರ, ಬ್ಯಾಗ್ ಖರೀದಿಸಲು ಪ್ರತಿ ವಿದ್ಯಾರ್ಥಿಗೆ 1100 ರೂ. ನೀಡಲಿದ್ದು, ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
ಉತ್ತರಪ್ರದೇಶ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಸಮವಸ್ತ್ರ ವಿತರಣೆ ವಿಳಂಬ ತಡೆಗಟ್ಟುವ ಉದ್ದೇಶದಿಂದ ಸರ್ಕಾರವೇ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡಲಿದೆ. 600 ರೂಪಾಯಿ ಸಮವಸ್ತ್ರಕ್ಕೆ, ಹಾಗೂ ಶಾಲಾ ಬ್ಯಾಗ್, ಶೂ, ಸಾಕ್ಸ್ ಖರೀದಿಗೆ 500 ರೂ. ನೀಡಲಾಗುವುದು.
1.6 ಕೋಟಿ ವಿದ್ಯಾರ್ಥಿಗಳ ಖಾತೆಗೆ ತಲಾ 1100 ರೂಪಾಯಿ ಜಮಾ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.