ರಾಜಸ್ಥಾನದ ಧೋಲ್ ಪುರದಲ್ಲಿ ಶುಕ್ರವಾರ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಉತ್ತರ ಪ್ರದೇಶದ ಆಗ್ರಾ ಮೂಲದ 5 ಜನರು ಪಾರ್ವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ದಸರಾ ಸಂದರ್ಭದಲ್ಲಿ ದುರ್ಗಾ ಮೂರ್ತಿಯನ್ನು ವಿಸರ್ಜಿಸಲು 5 ಜನರು ರಾಜಸ್ಥಾನದ ಧೋಲ್ಪುರ್ಗೆ ಬಂದಾಗ ಈ ಘಟನೆ ನಡೆದಿದೆ ಎಂದು ಆಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಎಸ್ಪಿ) ಮುನಿರಾಜ್ ಹೇಳಿದ್ದಾರೆ.
ಸಂತ್ರಸ್ತರು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಭಾವನಪುರ ಗ್ರಾಮದ ನಿವಾಸಿಗಳು ಎಂದು ಮುನಿರಾಜ್ ಹೇಳಿದ್ದು, ಸಂತ್ರಸ್ತರ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.