ನವದೆಹಲಿ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎನ್ನುವುದು ಮತದಾನ ಪೂರ್ವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಬಿಜೆಪಿಗೆ ಸರಳ ಬಹುಮತ ಬರಲಿದೆ.
205 ರಿಂದ 221 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವ ಸಾಧ್ಯತೆ ಇದೆ ಎನ್ನುವುದು ಟಿವಿ9 ಭಾರತ್ ವರ್ಷ ಮತ್ತು ಪೋಲ್ ಸ್ಟ್ಯಾಬ್ ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಉತ್ತರಪ್ರದೇಶದ 403 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಬಿಜೆಪಿ ಈ ಬಾರಿ 205 ರಿಂದ 221 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಸಮಾಜವಾದಿ ಪಕ್ಷ 144 ರಿಂದ 158 ಕ್ಷೇತ್ರಗಳಲ್ಲಿ ಜಯಗಳಿಸಬಹುದು. ಬಹುಜನ ಸಮಾಜ ಪಕ್ಷ 21 ರಿಂದ 31 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 2 ರಿಂದ 7 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಎರಡು ಕ್ಷೇತ್ರಗಳು ಪಕ್ಷೇತರರ ಪಾಲಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಗಳು ಕೆಲವೊಮ್ಮೆ ನಿಜವಾದರೆ, ಕೆಲವೊಮ್ಮೆ ಸುಳ್ಳಾಗಿವೆ. ಸಮೀಕ್ಷೆಯೇ ಸತ್ಯವಲ್ಲ, ಅದು ಆಯಾ ಸಂದರ್ಭದಲ್ಲಿ ಮತದಾರರ ಮನಸ್ಥಿತಿ ಆಧರಿಸಿರುತ್ತದೆ. 7 ಹಂತಗಳಲ್ಲಿ ಉತ್ತರಪ್ರದೇಶದ 403 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಿಖರ ಫಲಿತಾಂಶ ತಿಳಿಯಲು ಫಲಿತಾಂಶದವರೆಗೂ ಕಾಯಬೇಕಿದೆ.