ಉತ್ತರ ಪ್ರದೇಶದ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರತ್‌ನ ಹಸ್ತಿನಾಪುರಿಂದ ಕಣಕ್ಕಿಳಿಯುತ್ತಿರುವ ಅರ್ಚನಾ ಗೌತಮ್, ಮಾಧ್ಯಮದಲ್ಲಿ ತಮ್ಮ ವೃತ್ತಿಯನ್ನು ರಾಜಕೀಯ ಕ್ಷೇತ್ರದೊಂದಿಗೆ ತುಲನೆ ಮಾಡದಿರಲು ಮತದಾರರಲ್ಲಿ ಕೇಳಿಕೊಂಡಿದ್ದಾರೆ.
“ಮಿಸ್ ಬಿಕಿನಿ 2018ರಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದೆ. 2014ರಲ್ಲಿ ನಾನು ಮಿಸ್ ಉತ್ತರ ಪ್ರದೇಶ ಆಗಿದ್ದೆ ಮತ್ತು 2018ರಲ್ಲಿ ಮಿಸ್ ಕಾಸ್ಮೋ ವರ್ಲ್ಡ್ ಸಹ ಆಗಿದ್ದೆ. ನನ್ನ ರಾಜಕೀಯ ವೃತ್ತಿ ಜೀವನದೊಂದಿಗೆ ನನ್ನ ಮಾಧ್ಯಮ ವೃತ್ತಿಯನ್ನು ಹೋಲಿಸಿ ನೋಡದೇ ಇರಲು ನಾನು ಜನರಲ್ಲಿ ಕೋರುತ್ತೇನೆ,” ಎಂದು ಗೌತಮ್ ತಿಳಿಸಿದ್ದಾರೆ.
BIG SHOCKING: ಬೈಕ್ ನಲ್ಲಿ ಹೋಗ್ತಿದ್ದ ಯುವತಿಯ ಕತ್ತು ಸೀಳಿ ಜೀವ ತೆಗೆದ ಗಾಳಿಪಟದ ದಾರ
ಕಳೆದ ವರ್ಷದ ನವೆಂಬರ್‌ನಲ್ಲಿ ಅರ್ಚನಾ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ತಾವೇನಾದರೂ ಚುನಾವಣೆಯಲ್ಲಿ ಗೆದ್ದು ಬಂದರೆ ಹಸ್ತಿನಾಪುರದ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಒತ್ತು ನೀಡುವುದಾಗಿ ತಿಳಿಸಿದ್ದಾರೆ.
“ಹಸ್ತಿನಾಪುರ ಒಂದು ಪ್ರವಾಸಿ ತಾಣವಾಗಿದ್ದು, ಬಹಳ ಪುರಾತನವಾದ ದೇವಸ್ಥಾನಗಳಿವೆ. ಆದರೆ ಸಂಪರ್ಕದ ಸಮಸ್ಯೆ ಕಾರಣ ಜನರಿಗೆ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಶಾಸಕಿಯಾದ ಬಳಿಕ, ನನ್ನ ಮೊದಲ ಆದ್ಯತೆ ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣ ಕಟ್ಟುವುದಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ಸಿಕ್ಕಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದು, ಇಲ್ಲಿನ ಬಹಳಷ್ಟು ಮಂದಿಗೆ ಉದ್ಯೋಗ ಸಿಗಲಿದೆ,” ಎಂದು ಅರ್ಚನಾ ಗೌತಮ್ ತಿಳಿಸಿದ್ದಾರೆ.