ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಭೂ ಮಾಫಿಯಾ ಮತ್ತು ಕೊಲೆ, ಅಪಹರಣದಂಥ ಗಂಭೀರ ಅಪರಾಧಗಳನ್ನು ರಾಜ್ಯದಲ್ಲಿ ಬಹುತೇಕ ನಿಯಂತ್ರಿಸಿದ್ದಾರೆ. ಹೀಗಾಗಿ ಇಂಥವರಿಗೆ ಯಾವಾಗಲೂ ಪ್ರಾಣಾಪಾಯ ಇದ್ದೇ ಇರುತ್ತದೆ.
ಸದ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಸಂಭಾಲ್ ಜಿಲ್ಲೆಗೆ ಭೇಟಿ ನೀಡಿದ್ದರು. ಅಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಭದ್ರತಾ ಲೋಪವಾಗಿದೆ.
ಮಹಿಳೆಯರ ಶರ್ಟ್ನಲ್ಲಿ ಗುಂಡಿ ಎಡ ಹಾಗೂ ಪುರುಷರ ಶರ್ಟ್ನಲ್ಲಿ ಬಲಭಾಗದಲ್ಲಿರಲು ಕಾರಣವೇನು ಗೊತ್ತಾ..?
ಯೋಗಿ ಆದಿತ್ಯನಾಥ್ ಅವರು ಜನರನ್ನು ಸಂಬೋಧಿಸುತ್ತಿದ್ದ ವೇದಿಕೆಯ ಹತ್ತಿರಕ್ಕೆ ಇಬ್ಬರು ಬಾಲಕಿಯರು ಬಂದಿದ್ದಾರೆ. ಭದ್ರತಾ ಸಿಬ್ಬಂದಿ ಅಲ್ಲಿಯೇ ಇದ್ದರಾದರೂ ಯೋಗಿಜೀ ಪರವಾಗಿ ಘೋಷಣೆಗಳನ್ನು ಕೂಗುತ್ತಲೇ ಬಾಲಕಿಯರು ವೇದಿಕೆ ಹತ್ತಿರಕ್ಕೆ ಧಾವಿಸಿದ್ದಾರೆ. ಕೂಡಲೇ ಸೋದರಿಯರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಹೊರಬಂದ ಸತ್ಯವೇ ಬೇರೆ…!
ಬಾಲಕಿಯರು ಸೋದರಿಯರಾಗಿದ್ದು, ಅವರದ್ದು ಚಂದೌಸಿ ಗ್ರಾಮ. ಅವರ ತಂದೆ, ಯೋಗಿ ಆದಿತ್ಯನಾಥ್ ಅವರು ಮತ್ತೊಮ್ಮೆ ಅಧಿಕಾರಕ್ಕೆ ಏರಲಿ ಎಂದು ಸತತವಾಗಿ ವರ್ಷಗಳಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಲೇ ಇದ್ದಾರಂತೆ. ಈ ಬಾರಿ ಸಿಎಂ ಯೋಗಿಜೀ ಅವರು ಚಂದೌಸಿ ಗ್ರಾಮಕ್ಕೆ ಭೇಟಿ ನೀಡಬೇಕು, ಅಲ್ಲಿ ತಮ್ಮ ತಂದೆಯನ್ನು ಮಾತನಾಡಿಸಬೇಕು ಎಂದು ಮನವಿ ಮಾಡಲು ಅವರು ವೇದಿಕೆಯ ಹತ್ತಿರಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಹಂತಗಳಲ್ಲಿ ಮತದಾನ ಎದುರಿಸಲಿರುವ ಉತ್ತರಪ್ರದೇಶದಲ್ಲಿ ಮಾ.10ರಂದು ಫಲಿತಾಂಶ ಹೊರಬೀಳಲಿದೆ.