ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ, ಆದರೂ ಒಟ್ಟಾರೆ ಮತದಾನ ಮತ್ತು ಮಹಿಳಾ ಮತದಾನದ ಶೇಕಡಾವಾರು ಪ್ರಮಾಣವು 2017 ರ ಚುನಾವಣೆಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಅಂತಿಮ ಇವಿಎಂ ಮತದಾನದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ ಮತದಾನವು 60.8 ಪ್ರತಿಶತದಷ್ಟಾಗಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ 61.11 ಪ್ರತಿಶತ ಮತದಾನವಾಗಿತ್ತು. ಉತ್ತರ ಪ್ರದೇಶದಲ್ಲಿ ಶೇಕಡಾ 62.24 ಪ್ರತಿಶತದಷ್ಟು ಮಹಿಳಾ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಈ ಬಾರಿ 59.56 ಪ್ರತಿಶತ ಪುರುಷರು ಮತ ಚಲಾಯಿಸಿದ್ದಾರೆ.
ಆದರೆ 2017ರಲ್ಲಿ 63.38 ಪ್ರತಿಶತದಷ್ಟು ಮಹಿಳೆಯರು ಮತ ಚಲಾಯಿಸಿದ್ದರು. ಇದೇ ವರ್ಷ 59.21 ಪ್ರತಿಶತದಷ್ಟು ಪುರುಷರು ಮತ ಚಲಾಯಿಸಿದ್ದರು. 2017ಕ್ಕೆ ಹೋಲಿಕೆ ಮಾಡಿದರೆ ಮಹಿಳೆಯರ ಮತದಾನದ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಪುರುಷರ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.