ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ.
ರಾಣಿ ಹಾಗೂ ಸಂಕಲ್ಪ್ ಪರಿಹಾರ್ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ ಎರಡು ಮಾವಿನ ಸಸಿಗಳನ್ನು ಬೆಳೆಯಲು ಆರಂಭಿಸಿದ್ದಾಗಿಯೂ, ಅದು ತಮಗೇ ಅಚ್ಚರಿಯಾಗುವ ಹಾಗೆ ಜಪಾನ್‌ನ ಮಿಯಾಜ಼ಾಕಿ ತಳಿಯದ್ದೆಂದು ನಂತರ ತಿಳಿದುಬಂದಿದ್ದಾಗಿ ಹೇಳಿದ್ದಾರೆ.
ದೇಶದ್ರೋಹ ಪ್ರಕರಣದಲ್ಲಿ ನಟಿ ಆಯೀಷಾ ಸುಲ್ತಾನಾಗೆ ಬಿಗ್ ರಿಲೀಫ್
ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಂದ ತಮಗೆ ಈ ಸಸಿಗಳು ಸಿಕ್ಕಿದ್ದಾಗಿ ಪರಿಹಾರ್ ತಿಳಿಸಿದ್ದು, ಆ ವೇಳೆಯಲ್ಲಿ ಅವು ಮಯಾಜ಼ಾಕಿ ಮಾವಿನ ಸಸಿಗಳು ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
ಗೋಲ್ಡ್ ಹಾಲ್ಮಾರ್ಕಿಂಗ್: ಚಿನ್ನ ವ್ಯಾಪಾರಿಗಳಿಗೆ ‘ನೆಮ್ಮದಿ’ ನೀಡಿದ ಸರ್ಕಾರ
ತಾವು ಬೆಳೆದ ಒಂದೇ ಒಂದು ಮಾವಿನ ಹಣ್ಣಿಗೆ 21,000 ರೂಪಾಯಿಯಷ್ಟು ಬೆಲೆ ಕೊಡುವುದಾಗಿ ಹೇಳಿಕೊಂಡು ಅನೇಕ ಮಂದಿ ಸಂಪರ್ಕಿಸಿದ್ದಾಗಿ ರಾಣಿ ತಿಳಿಸಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ 2.70 ಲಕ್ಷ ರೂ./ಕಿಲೋ ದರದಲ್ಲಿ ಮಾರಾಟವಾದ ಮಿಯಾಜ಼ಾಕಿ ಮಾವಿನ ಹಣ್ಣು ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ.