ಲಖ್ನೋ: ಉತ್ತರಪ್ರದೇಶ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 5500 ರೂಪಾಯಿ ಗೌರವಧನ ನೀಡುತ್ತಿದ್ದು, ಅದನ್ನು 1500 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಮಾಸಿಕ 7000 ರೂ. ಗೌರವಧನ ನೀಡಲಾಗುವುದು.
ಮಿನಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನವನ್ನು ಕೂಡ ಏರಿಕೆ ಮಾಡಲಾಗಿದೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮಾಸಿಕ ಗೌರವಧನ 1250 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಅವರು ಮಾಸಿಕ 5500 ರೂಪಾಯಿ ಪಡೆಯಲಿದ್ದಾರೆ.
ಅಂಗನವಾಡಿ ಸಹಾಯಕಿಯರಿಗೆ ತಿಂಗಳ ಗೌರವಧನ 750 ರೂ. ಹೆಚ್ಚಳ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಅಭಿವೃದ್ಧಿ ಮತ್ತು ಪೌಷ್ಟಿಕಾಂಶ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ಹೆಕಾಳಿ ಜಿಮೋಮಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ಸುಮಾರು 3.70 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಪ್ರಯೋಜನ ಪಡೆಯಲಿದ್ದಾರೆ.