
ಲಕ್ನೋ: ವೈಜಯಂತಿ ಮಾಲೆ ಇನ್ನೇನು ಕೊರಳಿಗೆ ಬೀಳಬೇಕು. ಅಷ್ಟರಲ್ಲಿ ವಧುವಿಗೆ ಅದ್ಯಾವ ಕಾರಣಕ್ಕೋ ಪಿತ್ತ ನೆತ್ತಿಗೇರಿ, ವರನ ಕೆನ್ನೆಯ ಮೇಲೆ ಎರಡೇಟು ಬಿಗಿದು, ದುರದುರನೆ ಮಂಟಪವಿಳಿದು ಹೋದ ಘಟನೆ ಈಗ ಭಾರೀ ಸದ್ದು ಮಾಡುತ್ತಿದೆ.
ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಏ. 16ರಂದು ನೂರಾರು ಅತಿಥಿಗಳ ಸಮ್ಮುಖದಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಈ ಘಟನೆ ಜರಗಿದೆ. ವರ ವಧುವಿಗೆ ಮಾಲೆ ತೊಡಿಸಿದ್ದ. ಆದರೆ ಮಾಲೆ ತೊಡಿಸಬೇಕಿದ್ದ ವಧು, ಅದರ ಬದಲಿಗೆ ಆತನ ಕೆನ್ನೆ ಮೇಲೆ ಬೆರಳಚ್ಚು ಮೂಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ಬೇಸಿಗೆಯಲ್ಲಿ ಚವನ್‌ಪ್ರಾಶ್ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಸಂಪೂರ್ಣ ಮಾಹಿತಿ
ಬಂಧುಗಳ ಪ್ರಕಾರ, ಹುಡುಗಿಗೆ ಹುಡುಗ ಇಷ್ಟವಿರಲಿಲ್ಲವಂತೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ, ವಧುವನ್ನು ಸಮಾಧಾನಪಡಿಸಿ, ಈ ಮದುವೆ ಸಾಂಗವಾಗಿ ನೆರವೇರುವಂತೆ ನೋಡಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.