alex Certify ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ ಪ್ರಮುಖವಾದದ್ದು.

ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ಘಟನೆಯಲ್ಲಿ ಮದುವೆಯ ಅರ್ಧ ಪ್ರಕ್ರಿಯೆ ವೇಳೆ ವಧು ಮದುವೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾಳೆ. ಅದಕ್ಕೆ ಆಕೆ ನೀಡಿದ ಕಾರಣ ವರ ಬಹಳ ಕಪ್ಪು ಇದ್ದಾನೆಂಬುದಾಗಿದೆ.

ಮದುವೆಯ ಸಮಾರಂಭವು ಪ್ರಾರಂಭವಾದ ತಕ್ಷಣ, ದಂಪತಿಗಳು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲಿಂದ ಸಮಸ್ಯೆ ಶುರುವಾಯಿತು. ವಧು ನೀತಾ ಯಾದವ್​ ಎರಡು “ಫೆರಾ'(ಏಳು ಸುತ್ತು) ನಂತರ ವಿವಾಹವನ್ನು ಹಠಾತ್ತನೆ ರದ್ದುಗೊಳಿಸುವ ತನ್ನ ನಿರ್ಧಾರ ಪ್ರಕಟಿಸಿದ್ದಾಳೆ.

ಆಕೆಯ ಕುಟುಂಬ ಸದಸ್ಯರು ನಿಲುವು ಬದಲಿಸುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಸಹ, ಮದುವೆ ಮಂಟಪಕ್ಕೆ ಹಿಂದಿರುಗಲಿಲ್ಲ. ಆರು ಗಂಟೆ ಮಾತುಕತೆ ನಡೆದ ಬಳಿಕ ವರನು ತನ್ನ ಕುಟುಂಬ ಸದಸ್ಯರೊಂದಿಗೆ ವಾಪಸ್ ಹೊರಟಿದ್ದಾನೆ.

ವಧುವಿಗೆ ಉಡುಗೊರೆಯಾಗಿ ನೀಡಿದ್ದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಾಪಸ್​ ನೀಡಿಲ್ಲ ಎಂದು ವರನ ತಂದೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ತನ್ನ ಜೀವನಕ್ಕೆ ಕುತ್ತು ತಂದಿದೆ ಎಂದು ವರ ರವಿ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...