
ಗೆಳತಿಯೊಂದಿಗೆ ಸಿಕ್ಕಿಹಾಕಿಕೊಂಡ ಬಿಜೆಪಿ ಮುಖಂಡನಿಗೆ ಆತನ ಪತ್ನಿ ಹಾಗೂ ಅತ್ತೆ ರಸ್ತೆಯಲ್ಲೇ ಚಪ್ಪಲಿ ಸೇವೆ ನಡೆಸಿದ ಪ್ರಕರಣ ಕಾನ್ಪುರದಲ್ಲಿ ನಡೆದಿದೆ.
ರಸ್ತೆಯಲ್ಲಿ ತನ್ನ ಕುಟುಂಬದಿಂದಲೇ ಪೆಟ್ಟು ತಿಂದ ಮುಖಂಡನನ್ನು ಮೋಹಿತ್ ಸೋಂಕರ್ ಎಂದು ಗುರುತಿಸಲಾಗಿದೆ. ಈತ ಬುಂದೆಲ್ಕಂಡ್ ಪ್ರದೇಶದ ಬಿಜೆಪಿ ಕಾರ್ಯದರ್ಶಿಯಾಗಿದ್ದಾನೆ.
ಆತನು ಕಾರಿನಲ್ಲಿ ಬ್ಯುಸಿನೆಸ್ ಮೆನ್ ಸ್ನೇಹಿತೆ ಜೊತೆಯಲ್ಲಿದ್ದಾಗಲೇ ಕುಟುಂಬ ಬೆನ್ನತ್ತಿ ಹಿಡಿದಿದೆ. ರಸ್ತೆಯಲ್ಲಿ ಮಾರಾಮಾರಿ ಜಗಳ ನಡೆದಿದ್ದು, ಪತ್ನಿ ಸೇರಿ ಜೊತೆಗಿದ್ದವರು ಪೆಟ್ಟುಕೊಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.