ಲಖ್ನೋ: ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕನಿಗೆ 5 ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ್ದು, 6 ನೇ ಡೋಸ್ ಪಡೆಯಲು ಸಮಯ ನಿಗದಿ ಮಾಡಿದ ಬಗ್ಗೆ ಪ್ರಮಾಣ ಪತ್ರ ನೀಡಿದ್ದು, ತನಿಖೆಗೆ ಆದೇಶಿಸಲಾಗಿದೆ
ಉತ್ತರ ಪ್ರದೇಶದ ಮೀರತ್‌ನಲ್ಲಿ ಬಿಜೆಪಿ ಬೂತ್ ಮಟ್ಟದ ನಾಯಕನ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ 5 ಡೋಸ್ ಕೊರೋನಾ ವೈರಸ್ ಲಸಿಕೆ ನೀಡಲಾಗಿದೆ ಎಂದು ತೋರಿಸುತ್ತದೆ. ಇದಷ್ಟೇ ಅಲ್ಲ, ಆರನೇ ಡೋಸ್ ಪಡೆಯಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಮೀರತ್ ಜಿಲ್ಲೆಯ ಸರ್ಧನ ಪ್ರದೇಶದ ರಾಂಪಾಲ್ ಸಿಂಗ್(73) ಅವರು ಬೂತ್ ನಂ 79 ರ ಬಿಜೆಪಿ ಅಧ್ಯಕ್ಷ ಮತ್ತು ಹಿಂದೂ ಯುವ ವಾಹಿನಿಯ ಸದಸ್ಯರೂ ಆಗಿದ್ದಾರೆ.
ಅವರು ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಅವರಿಗೆ 5 ಡೋಸ್ ಕೊರೋನಾ ವೈರಸ್ ಲಸಿಕೆ ನೀಡಲಾಗಿದೆ ಎಂದು ತೋರಿಸಿದ್ದು, 6 ನೇ ಡೋಸ್ ಕೂಡ ನಿಗದಿಪಡಿಸಲಾಗಿದೆ. ಅವರು ಈಗ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ, ಇದರ ನಂತರ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಗ್ ಅವರು ತಮ್ಮ ಮೊದಲ ಲಸಿಕೆಯನ್ನು ಮಾರ್ಚ್ 16 ರಂದು ಮತ್ತು ಎರಡನೆಯದನ್ನು ಮೇ 8 ರಂದು ಪಡೆದಿದ್ದಾರೆ. ಆದಾಗ್ಯೂ, ಅಧಿಕೃತ ಪೋರ್ಟಲ್‌ನಿಂದ ಅವರ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿದಾಗ, 5 ಡೋಸ್ ಲಸಿಕೆ ನೀಡಿದ್ದು, ಡಿಸೆಂಬರ್ 2021 ಮತ್ತು ಜನವರಿ 2022 ರ ನಡುವೆ 6 ನೇ ಡೋಸ್ ಪಡೆಯಲು ಸಮಯ ನಿಗದಿಪಡಿಸಲಾಗಿದೆ ಎಂದು ತೋರಿಸಿದೆ.
ಪ್ರಮಾಣಪತ್ರದಲ್ಲಿ ಮೊದಲ ಡೋಸನ್ನು ಮಾರ್ಚ್ 16 ರಂದು, ಎರಡನೆಯದು ಮೇ 8 ರಂದು, ಮೂರನೆಯದು ಮೇ 15 ರಂದು ಮತ್ತು ನಾಲ್ಕನೇ ಮತ್ತು 5 ನೇ ಡೋಸ್ ಸೆಪ್ಟೆಂಬರ್ 15 ರಂದು ಪಡೆಯಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್, ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.