
ಲಖ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶುಕ್ರವಾರ ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ತೆಹ್ರಿಖ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ)-ಸಂಬಂಧಿತ ಭಯೋತ್ಪಾದಕ ಮುಹಮ್ಮದ್ ನದೀಮ್ ನನ್ನು ಸಹರಾನ್ ಪುರದಲ್ಲಿ ಬಂಧಿಸಿದೆ.
ನದೀಮ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಇಎಂ ಮತ್ತು ಟಿಟಿಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದ. ನೂಪುರ್ ಶರ್ಮಾ ಅವರನ್ನು ಕೊಲ್ಲುವ ಕೆಲಸವನ್ನು ಆತನಿಗೆ ವಹಿಸಲಾಗಿತ್ತು ಎಂದು ಯುಪಿ ಎಟಿಎಸ್ ಹೇಳಿದೆ.