ನವದೆಹಲಿ: ನಿನ್ನೆಯಷ್ಟೇ ಮಹತ್ವದ ಕಾರ್ಯಾಚರಣೆಯಲ್ಲಿ 6 ಮಂದಿ ಉಗ್ರರನ್ನು ಸೆರೆಹಿಡಿದಿದ್ದ ATS ಇಂದು ಮತ್ತೆ ಮೂವರನ್ನು ಬಂಧಿಸಿದೆ.
ಉತ್ತರಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಲಾಗಿದೆ. ಪ್ರತಾಪ್ ಗಢದ ಇಮ್ತಿಯಾಜ್, ಪ್ರಯಾಗ್ ರಾಜ್ ನ ಮೊಹಮ್ಮದ್ ತಾಹೀರ್, ರಾಯ್ ಬರೇಲಿಯ ಜಮೀಲ್ ಅಲಿಯಾಸ್ ಜಮೀಲ್ ಖಾತ್ರಿ ಎಂಬುವರನ್ನು ಬಂಧಿಸಲಾಗಿದೆ.
ಇವರು ಪಾಕಿಸ್ತಾನ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಅವರನ್ನು ದೆಹಲಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಇವರು ಸಂಚು ರೂಪಿಸಿದ್ದರು. ನವರಾತ್ರಿಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನುವುದು ಗೊತ್ತಾಗಿದೆ.
ನಿನ್ನೆ 6 ಮಂದಿ ಬಂಧಿಸಿ ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವತ್ತು ಕಾರ್ಯಾಚರಣೆ ಮುಂದುವರೆಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಅವರು, ಪ್ರಯಾಗರಾಜ್, ರಾಯ್ ಬರೇಲಿ ಮತ್ತು ಪ್ರತಾಪಗಢದಿಂದ ಮೂವರನ್ನು ಬಂಧಿಸಲಾಗಿದೆ. ಅವರಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.