ಪಂಚರಾಜ್ಯ ಚುನವಣಾ ಫಲಿತಾಂಶದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಹೊರತುಪಡಿಸಿ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಹೆಚ್ಚಿದೆ.
ಪಂಜಾಬ್ ಚುನಾವಣೆ ಫಲಿತಾಂಶದಲ್ಲಿ ಆಪ್ ಮೇಲುಗೈ; ಭಗವಂತ್ ಮನೆ ಎದುರು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು..!
ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಯುಪಿಯಲ್ಲಿ ಮಹಿಳೆಯರು ಬಿಜೆಪಿಗೆ ವೋಟ್ ಮಾಡಿದ್ದಾರೆ, ಪುರುಷರು ಎಸ್.ಪಿ.ಗೆ ಮತ ಹಾಕಿರಬಹುದು ಎಂದಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ: ಸಮೀಕ್ಷೆಯಲ್ಲಿ ಬಹಿರಂಗ
ಪ್ರಬುದ್ಧ ರಾಜಕಾರಣಿಯಾಗಿ ನಾನು ಫಲಿತಾಂಶದ ಬಗ್ಗೆ ಮಾತನಾಡುವುದಿಲ್ಲ. ಆದರೆ ಆರಂಭಿಕ ಹಂತದಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಹೆಚ್ಚಿದೆ. ಬಹುಶಃ ಉತ್ತರಪ್ರದೇಶದ ಎಲ್ಲಾ ಮಹಿಳೆಯರು ಬಿಜೆಪಿ ಪಕ್ಷಕ್ಕೆ ಮತ ಹಾಕಿರಬಹುದು, ಪುರುಷರು ಸಮಾಜವಾದಿ ಪಕ್ಷಕ್ಕೆ ವೋಟ್ ನೀಡಿರಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಈ ವೇಳೆ ಬಿಜೆಪಿ ಸಾಮರ್ಥ್ಯದ ಬಗ್ಗೆ ಮಾತನಾಡಿದ ಚಂದ್ರಕಾಂತ್ ಪಾಟೀಲ್, ಬಿಜೆಪಿಯನ್ನು ಸೋಲಿಸುವುದು ನಿಮ್ಮ ತಲೆಯನ್ನು ನೀವೆ ಗೋಡೆಗೆ ಹೊಡೆದುಕೊಳ್ಳುವುದಕ್ಕೆ ಸಮ ಎಂದಿದ್ದಾರೆ.