ಸಾಮಾಜಿಕ ಜಾಲತಾಣಗಳು ಬೆಳೆದೆಂತೆಲ್ಲ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ವಿಶೇಷವಾಗಿ ಪುರುಷರನ್ನು ಬಲೆಗೆ ಕೆಡವುವ ಹನಿ ಟ್ರ್ಯಾಪ್ ದಂಧೆಯಂತೂ ಎಗ್ಗಿಲ್ಲದೇ ಸಾಗುತ್ತಿದೆ.
ಈ ಮಾತಿಗೆ ಪುಷ್ಠಿ ಎಂಬಂತೆ ಶ್ರೀನಗರದ ಆಸ್ಪತ್ರೆಯಲ್ಲಿ ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿಯು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಹಿಳೆಯು ಸೇನಾ ಅಧಿಕಾರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ.
2 ವರ್ಷಗಳ ಹಿಂದೆ ಸೇನೆಯ ಫಿಸಿಯೋಥೆರಪಿಸ್ಟ್ ರನ್ನು ಓಡಿಶಾದಲ್ಲಿ ನೇಮಿಸಲಾಗಿತ್ತು. ಈ ಸಮಯದಲ್ಲಿ ಸೇನಾ ಅಧಿಕಾರಿಯು ಇನ್ಸ್ಟಾಗ್ರಾಂ ಮೂಲಕ ಮಹಿಳೆಯ ಸಂಪರ್ಕ ಮಾಡಿದ್ದರು ಹಾಗೂ ಆಕೆಯೊಂದಿಗೆ ಸ್ನೇಹವನ್ನೂ ಬೆಳೆಸಿದ್ದರು.
ಇದಾದ ಬಳಿಕ ಸೇನಾ ಅಧಿಕಾರಿಯು ಆ ಮಹಿಳೆಯೊಂದಿಗೆ ಸೆಕ್ಸ್ ಸಂಬಂಧವನ್ನೂ ಹೊಂದಿದ್ದರು. ಆದರೆ ಲೈಂಗಿಕ ಸಂಪರ್ಕದ ಸಂಪೂರ್ಣ ದೃಶ್ಯಾವಳಿಗಳನ್ನು ವಿಡಿಯೋದಲ್ಲಿ ಸೆರೆಹಿಡಿದುಕೊಂಡಿದ್ದ ಮಹಿಳೆ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮದುವೆಗೆ ಸಂಬಂಧಿಸಿದ ಕೆಲ ಕಾಗದ ಪತ್ರಗಳ ಮೇಲೆ ಸಹಿ ಹಾಕಿಸಿಕೊಂಡ ಚಾಲಾಕಿ ಮಹಿಳೆ ಬಳಿಕ ಅಧಿಕಾರಿಯಿಂದ ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನು ಪೀಕಿದ್ದಾಳೆ. ಇದು ಮಾತ್ರವಲ್ಲದೇ ಅಧಿಕಾರಿಗೆ ಸೇರಿದ ಕೆಲ ಆಸ್ತಿಗಳನ್ನೂ ತನ್ನ ಹೆಸರಿಗೆ ಬರೆಯುವಂತೆ ತಾಕೀತು ಮಾಡಿದ್ದಳು ಎನ್ನಲಾಗಿದೆ.
ಸೇನಾ ಅಧಿಕಾರಿಯ ಸೋದರ ಸಂಬಂಧಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಸ್ತುತ ರಜೆಯ ಮೇಲಿರುವ ಸೇನಾಧಿಕಾರಿಯು ಫಿರೋಜಾಬಾದ್ನಲ್ಲಿರುವ ತನ್ನ ಸಂಬಂಧಿಯ ಮನೆಯಲ್ಲಿ ವಾಸವಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಮಹಿಳೆಯ ತಂದೆ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವಂಚನೆ ಆರೋಪದ ಅಡಿಯಲ್ಲಿ ಜೈಲು ಸೇರಿದ್ದ ಮಹಿಳೆಯ ತಂದೆ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದರು.