
ಬರೇಲಿ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಮೊಜೋಲಾ ಹನುಮಾನ್ ನಗರದಲ್ಲಿ ವ್ಯಕ್ತಿಯೊಬ್ಬ ಮಗನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಶ್ನಿಸಿದ ಮಗನನ್ನೇ ಕೊಲೆ ಮಾಡಿದ್ದಾನೆ.
ಮನೆಯವರೆಲ್ಲರೂ ಊರಿಗೆ ಹೋಗಿದ್ದ ಸಂದರ್ಭದಲ್ಲಿ 56 ವರ್ಷದ ವ್ಯಕ್ತಿ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಘಾತಕ್ಕೆ ಒಳಗಾದ ಸೊಸೆ ಮನೆಗೆ ಮರಳಿದ ಗಂಡ ಮತ್ತು ಅತ್ತೆಗೆ ಮಾವನ ನೀಚ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ.
ಇದರಿಂದಾಗಿ ತಂದೆ, ಮಗನ ನಡುವೆ ಜಗಳವಾಗಿದ್ದು, ಕಿರಿಯ ಮಗ ತಂದೆಯನ್ನೇ ಬೆಂಬಲಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ತಂದೆ ಪಿಸ್ತೂಲ್ ನಿಂದ ಫೈರಿಂಗ್ ಮಾಡಿ ಪ್ರಶ್ನಿಸಿದ ಮಗನನ್ನು ಕೊಲೆ ಮಾಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸಿದ್ದಾರೆ. ಸೊಸೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.