ಬೆಂಗಳೂರು: ಅತಿ ಹೆಚ್ಚು ವೇಗವಾಗಿ ಹರಡುವ ರೂಪಾಂತರ ಒಮಿಕ್ರಾನ್ ನಿಂದ ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿವೆ.
ಜನವರಿ 1 ರಿಂದ 7 ರವರೆಗೆ ಕಳೆದ 7 ದಿನಗಳಲ್ಲಿ ಸೋಂಕುಗಳ ವಿಶ್ಲೇಷಣೆ ಅನ್ವಯ ಲಸಿಕೆ ಪಡೆದವರಿಗಿಂತ ಲಸಿಕೆ ಹಾಕದ ಜನರು ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಸಾಧ್ಯತೆ 30 ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಕೋವಿಡ್-19 ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್, ಲಸಿಕೆ ಹಾಕದ ಜನರು ಲಸಿಕೆ ಹಾಕಿದವರಿಗಿಂತ 10 ಪಟ್ಟು ಹೆಚ್ಚು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಲಸಿಕೆ ಹಾಕಿದವರಿಗೆ ಹೋಲಿಸಿದರೆ ಲಸಿಕೆ ಹಾಕದ ಜನರು ಐಸಿಯು ಅಥವಾ ಹೈ ಡಿಪೆಂಡೆನ್ಸಿ ಯುನಿಟ್ (ಹೆಚ್‌ಡಿಯು) ನಲ್ಲಿ ದಾಖಲಾಗುವ ಸಾಧ್ಯತೆ 30 ಪಟ್ಟು ಹೆಚ್ಚು ಎಂದು ಅವರು ಹೇಳಿದರು.
ವಿಶ್ಲೇಷಣೆಯ ತೀರ್ಮಾನಕ್ಕೆ ಬರುವ ವಿಧಾನವನ್ನು ವಿವರಿಸಿದ ಅವರ ಪ್ರಕಾರ, 97 ಪ್ರತಿಶತ ನಾಗರಿಕರು ಲಸಿಕೆಯನ್ನು ಪಡೆದಿದ್ದು, 3 ಪ್ರತಿ ಶತದಷ್ಟು ಮಂದಿ ಲಸಿಕೆ ಪಡೆದಿಲ್ಲ, ಇಬ್ಬರೂ COVID ಗೆ ಸಮಾನವಾಗಿ ದುರ್ಬಲರಾಗಿದ್ದರೆ, ಪ್ರತಿ 100 COVID ಪ್ರಕರಣಗಳು ಅಥವಾ ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿ, 97 ಜನರು ಲಸಿಕೆಯನ್ನು ಪಡೆದವರಾಗಿದ್ದು, ಮತ್ತು ಮೂವರಿಗೆ ಲಸಿಕೆ ಹಾಕಿರುವುದಿಲ್ಲ. ಆದರೆ, ಪ್ರಮಾಣಾನುಗುಣವಾಗಿ ಲಸಿಕೆ ಹಾಕದಿರುವವರಲ್ಲಿ 10 ಪಟ್ಟು ಕೋವಿಡ್ ತೀವ್ರತೆ, ಐಸಿಯುನಲ್ಲಿ ನಿರೀಕ್ಷೆಗಿಂತ 30 ಪಟ್ಟು ಹೆಚ್ಚು. COVID ತೊಡಕುಗಳನ್ನು ತಪ್ಪಿಸಲು ವ್ಯಾಕ್ಸಿನೇಷನ್ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಅರ್ಹರು ಪ್ರತಿಯೊಬ್ಬರೂ ಅದನ್ನು ತೆಗೆದುಕೊಳ್ಳಬೇಕು ಎಂದು IAS ಅಧಿಕಾರಿ ಮೌದ್ಗಿಲ್ ತಿಳಿಸಿದ್ದಾರೆ.
ಸಂಪೂರ್ಣ ಲಸಿಕೆಯನ್ನು ಪಡೆದ ಬಹುಪಾಲು ರೋಗಿಗಳ ಸಾಧ್ಯತೆಯ ಬಗ್ಗೆ ಅವರು ಮಾಹಿತಿ ನೀಡಿ, ಅನೇಕರು ಮುನ್ನೆಚ್ಚರಿಕೆಯಿಂದ ಆಸ್ಪತ್ರೆಗೆ ದಾಖಲಾಗಿರಬಹುದು. ಸಾಮಾನ್ಯ ಹಾಸಿಗೆಗಳಿಗಿಂತ ಐಸಿಯುನಲ್ಲಿರುವ ಜನರ ನಿಜವಾದ ಸಂಖ್ಯೆ ನಿಜವಾದ ಹೋಲಿಕೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.