ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಜೀವಭಯದಿಂದ ದೇಶವನ್ನೇ ತೊರೆಯಲು ನಿರ್ಧರಿಸಿರುವ ಅಫ್ಘನ್ನರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದಿರುವ ಮನಕಲಕುವ ಅನೇಕ ದೃಶ್ಯಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿದ್ದೇವೆ.
ತಾಲಿಬಾನಿ ಆಡಳಿತದಲ್ಲಿ ಮಹಿಳೆಯರ ಪಾಡು ಹೇಗೆಲ್ಲಾ ಇರುತ್ತದೆ ಎಂದು 1996-2001ರ ನಡುವಿನ ಅವಧಿಯಲ್ಲಿ ಇಡೀ ಜಗತ್ತೇ ಕಂಡಿದೆ. ಅದೇ ಭೀತಿಯಿಂದಾಗಿ ಮಹಿಳೆಯರು ಪ್ರತಿ ಕ್ಷಣವನ್ನೂ ಅನಿಶ್ಚಿತತೆಯಿಂದ ಕಳೆಯುವಂತಾಗಿದೆ.
ತಾಲಿಬಾನ್ ಕೆಳಗೆ ಅಲ್ಲಿನ ಮಹಿಳೆಯರು ಎನೆಲ್ಲಾ ಅನುಭವಿಸಬಹುದು ಎಂಬ ಝಲಕ್ ಕಟ್ಟಿಕೊಡುವ ಪೋಸ್ಟ್ ಒಂದನ್ನು ಅಫ್ಘನ್ ಚಿತ್ರ ನಿರ್ಮಾಪಕಿ ಹಾಗೂ ಪತ್ರಕರ್ತೆ ರೋಯಾ ಹೆಯ್ದಾರಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ತಾಲಿಬಾನ್ ಹಿಡಿತದಲ್ಲಿರುವ ಕಾಬೂಲ್ ನಲ್ಲಿ ಐಸಿಸ್ ರಕ್ತದೋಕುಳಿ: ಸಾವಿನ ಸಂಖ್ಯೆ 90ಕ್ಕೆ ಏರಿಕೆ- ಶಾಕಿಂಗ್ ಮಾಹಿತಿ ನೀಡಿದ ಅಮೆರಿಕ
ಅನಿರ್ದಿಷ್ಟಾವಧಿಯವರೆಗೂ ತಮ್ಮ ತಾಯ್ನೆಲ ಬಿಟ್ಟು ಹೋಗುತ್ತಿರುವ ರೋಯಾ, “ನನ್ನ ದನಿಯನ್ನು ಕಾಪಾಡಿಕೊಂಡು ಹೋಗಲು ನಾನು ನನ್ನ ಇಡೀ ಜೀವನ ಹಾಗೂ ಮನೆಯನ್ನು ಬಿಟ್ಟಿದ್ದೇನೆ. ಮತ್ತೊಮ್ಮೆ ನಾನು ನನ್ನ ತಾಯ್ನೆಲದಿಂದ ಓಡಿ ಹೋಗುತ್ತಿದ್ದೇನೆ. ಮತ್ತೊಮ್ಮೆ ನಾನು ಎಲ್ಲವನ್ನೂ ಶೂನ್ಯದಿಂದ ಆರಂಭಿಸಲಿದ್ದೇನೆ. ನಾನು ಸಾಗರ ದಾಟಿ ಹೋಗುವ ವೇಳೆ ನನ್ನೊಂದಿಗೆ ಕ್ಯಾಮೆರಾಗಳು ಹಾಗೂ ಮೃತ ಆತ್ಮವನ್ನು ಹೊತ್ತೊಯ್ಯುತ್ತಿದ್ದೇನೆ. ಭಾರವಾದ ಹೃದಯದಿಂದ ನನ್ನ ತಾಯ್ನೆಲಕ್ಕೆ ಗುಡ್‌ಬೈ ಹೇಳುತ್ತಿದ್ದೇನೆ. ಮತ್ತೊಮ್ಮೆ ಭೇಟಿಯಾಗುವವರೆಗೂ…..” ಎಂದು ಭಾರವಾದ ಹೃದಯದಿಂದ ಟ್ವೀಟ್ ಮಾಡಿದ್ದಾರೆ.
https://twitter.com/heydari_roya/status/1430883632168816642?ref_src=twsrc%5Etfw%7Ctwcamp%5Etweetembed%7Ctwterm%5E1430883632168816642%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Funtil-we-meet-again-afghan-filmmakers-heartbreaking-post-on-leaving-afghanistan-goes-viral%2F804476