ದೇಶದ ಗಡಿ ಭಾಗದಲ್ಲಿ ಕರ್ತವ್ಯದಲ್ಲಿರುವ ಯೋಧರಿಗೆ ಶತ್ರಗಿಂತಲೂ ದೊಡ್ಡ ವೈರಿಯೆಂದರೆ ಅದು ವಿಪರೀತ ತಾಪಮಾನಗಳು. ಬೇಸಿಗೆಯಲ್ಲಿ ಪಶ್ಚಿಮದ ಮರುಭೂಮಿಯ ರಣ ಬಿಸಿಲು, ಶೀತಕಾಲದಲ್ಲಿ ಹಿಮಾಲಯ ಶ್ರೇಣಿಗಳ ಮೈಕೊರೆಯುವ ಚಳಿ, ಭಾರೀ ಮಳೆಯ ನಡುವೆಯೂ ಯೋಧರು ತಮ್ಮ ಕರ್ತವ್ಯ ಪಾಲನೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಾರೆ.
ಇಂಥ ಒಂದು ಜ್ವಲಂತ ನಿದರ್ಶನವೊಂದರಲ್ಲಿ, ಭಾರೀ ಹಿಮಪಾತ ಹಾಗೂ ಮೂಳೆ ಥರಗುಟ್ಟಿಸುವ ಚಳಿಯ ನಡುವೆ ಭಾರತೀಯ ಸೇನೆಯ ಯೋಧರೊಬ್ಬರು ಗಡಿ ಕಾಯುವ ತಮ್ಮ ಕರ್ತವ್ಯ ಪಾಲನೆಯಲ್ಲಿ ನಿರತರಾಗಿರುವ ವಿಡಿಯೋವೊಂದನ್ನು ರಕ್ಷಣಾ ಸಚಿವಾಲಯ ಶೇರ್ ಮಾಡಿಕೊಂಡಿದೆ. ಉಧಂಪುರದ ಸಾರ್ವಜನಿಕ ಸಂಬಂಧ ಅಧಿಕಾರಿ ಈ ಪುಟ್ಟ ಕ್ಲಿಪ್ ಹಂಚಿಕೊಂಡಿದ್ದಾರೆ.
ಕೊರೋನಾ ಸ್ಪೋಟ: ಶಾಲೆ ಬಂದ್, ಲಾಕ್ಡೌನ್ ನಂತಹ ನಿರ್ಬಂಧ ಹೇರದಂತೆ ಮಹತ್ವದ ಸಲಹೆ
ಶೂನ್ಯ ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ, ಮಂಡಿಯುದ್ದ ಹಿಮದಲ್ಲಿ ಗಸ್ತು ತಿರುಗುತ್ತಾ ಕಟ್ಟೆಚ್ಚರದ ಸ್ಥಿತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತಿರುವುದನ್ನು ಈ ಒಂದು ವಿಡಿಯೋದಲ್ಲಿ ನೋಡಬಹುದಾಗಿದೆ.
ಹಿಮಾಚ್ಚಾದಿತ ತಗ್ಗು ಪ್ರದೇಶದಲ್ಲಿ ಸೇನೆಯ ಜವಾನರು ಕರ್ತವ್ಯ ನಿರ್ವಹಿಸುವಾಗ ಏನೆಲ್ಲಾ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುತ್ತಾರೆ ಎಂಬ ಝಲಕ್ ತೋರುವ ಮತ್ತೊಂದು ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ನಿಮ್ಮ ಮುಂಜಾನೆಯ ನಡಿಗೆಯೊಂದಿಗೆ ಇದನ್ನು ಒಮ್ಮೆ ಹೋಲಿಸಿ ನೋಡಿ !” ಎಂದು ಟ್ವೀಟ್ ಮಾಡಲಾಗಿದೆ.