ಕೆಲವರ ಅದೃಷ್ಟ ಚೆನ್ನಾಗಿರುತ್ತೆ. ಕುಳಿತಲ್ಲಿಯೇ ಹಣ ಬರುತ್ತೆ. ಮತ್ತೆ ಕೆಲವರ ಅದೃಷ್ಟ ಎಷ್ಟು ಕೆಟ್ಟದಾಗಿರುತ್ತದೆ ಅಂದ್ರೆ ಕೈಗೆ ಬಂದ ಹಣ ಕೂಡ ಕೈಚೆಲ್ಲಿ ಹೋಗುತ್ತೆ. ಇದಕ್ಕೆ ಬ್ರಿಟನ್ ದಂಪತಿ ಉತ್ತಮ ನಿದರ್ಶನ. ಒಂದಲ್ಲ ಎರಡಲ್ಲ ಬರೋಬ್ಬರಿ 31 ಕೋಟಿ ಅವರ ಕೈ ತಪ್ಪಿದೆ. ಇದ್ರ ಜೊತೆ ಸಂಬಂಧ ಕೂಡ ಹಳಸಿದೆ.
ಬ್ರಿಟನ್ ನ ಮಾರ್ಟಿನ್ ಮತ್ತು ಕೇ ಟಾಟ್ ದಂಪತಿಗೆ ಲಾಟರಿ ಹೊಡೆದಿತ್ತು. 2001 ರಾಷ್ಟ್ರೀಯ ಲಾಟರಿ ಡ್ರಾ ನಡೆದು 6 ತಿಂಗಳ ನಂತ್ರ ತಮಗೆ ಲಾಟರಿ ಹೊಡೆದಿದೆ ಎಂಬುದು ಗೊತ್ತಾಗಿತ್ತು. ಈ ಸಂಬಂಧ ಅವರು ಲಾಟರಿ ಕಂಪನಿಯನ್ನು ಸಂಪರ್ಕಿಸಿದ್ದರು. ಆದ್ರೆ ಅವರಿಗೆ 31 ಕೋಟಿ ನೀಡಲು ಕಂಪನಿ ನಿರಾಕರಿಸಿತ್ತು. ದಂಪತಿ, ಕಂಪ್ಯೂಟರ್ ಮಾಹಿತಿ ಸೇರಿದಂತೆ ಅನೇಕ ದಾಖಲೆ ನೀಡಿದ್ದರು. ಆದ್ರೆ ಲಾಟರಿ ಟಿಕೆಟ್ ನೀಡಿರಲಿಲ್ಲ. ಲಾಟರಿ ಟಿಕೆಟ್ ಕಳೆದುಕೊಂಡು 1 ತಿಂಗಳಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅವರು ಯಾವುದೇ ಮಾಹಿತಿ ನೀಡಿರಲಿಲ್ಲ.
ದಂಪತಿ ಕೋರ್ಟ್ ಮೊರೆ ಹೋಗಿತ್ತು. ಆದ್ರೆ ಕೋರ್ಟ್ ಕೂಡ ಇದನ್ನು ನಿರಾಕರಿಸಿತ್ತು. ಕೊನೆಗೂ ದಂಪತಿಗೆ 31 ಕೋಟಿ ಹಣ ಸಿಗಲಿಲ್ಲ. ಇದ್ರಿಂದ ದಂಪತಿ ಮಧ್ಯೆ ಗಲಾಟೆ ಶುರುವಾಗಿತ್ತು. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇವರನ್ನು ಬ್ರಿಟನ್ ನ ದುರಾದೃಷ್ಟದ ಜೋಡಿ ಎಂದು ಕರೆಯುತ್ತಾರೆ.