
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ನಿರ್ಬಂಧ ತೆರವುಗೊಳಿಸಲಿದ್ದು, ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಮುಂದುವರಿಸಲು ನಿರ್ಧರಿಸಲಾಗಿದೆ. ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆ, ಕಚೇರಿ ಓಪನ್ ಇರುತ್ತವೆ. ಕೆಲಸಕ್ಕೆ ತೆರಳುವಾಗ ಐಡಿ ಕಾರ್ಡ್ ತೋರಿಸಿ ತೆರಳಬಹುದು. ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಮತ್ತು ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ಕೂಡ ಅವಕಾಶವಿದ್ದು, ಕೇವಲ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಟ್ರಕ್, ಸರಕು ಸಾಗಣೆ ವಾಹನ, ಹೋಮ್ ಡೆಲಿವರಿಗೆ ಅವಕಾಶವಿದೆ. ಬಸ್, ಟ್ಯಾಕ್ಸಿ ಸಂಚಾರ ಇರಲಿದೆ. ಟಿಕೆಟ್ ತೋರಿಸಿ ಸಂಚರಿಸಹುದು.
ಎರಡನೇ ಹಂತದ ಅನ್ ಲಾಕ್ ಮಾರ್ಗಸೂಚಿಯಲ್ಲಿ ಮದುವೆಗಳಲ್ಲಿ 40 ಜನರಿಗೆ ಅವಕಾಶ ಇರುತ್ತದೆ. ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಮಾತ್ರ ಅನ್ವಯವಾಗಲಿದೆ. ಅಂತ್ಯಸಂಸ್ಕಾರದ ವೇಳೆ 5 ಮಂದಿಗೆ ಅವಕಾಶವಿದೆ.