2000ನೇ ಇಸವಿಯಲ್ಲಿ ಭಾರತೀಯ ಮೂಲದ ಪ್ರಿಯಾಂಕಾ ಚೋಪ್ರಾ, ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದರು. ಪ್ರಸ್ತುತ ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು ನಿಕ್ ಜೋನಾಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ.
ಮೂರು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದು, ಇದೇ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ವಿಶ್ವಸುಂದರಿ ಸ್ಪರ್ಧಿಯಾಗಿದ್ದ ಮಾಜಿ ‘ಮಿಸ್ ಬಾರ್ಬೋಡಸ್’ ಲೈಲಾನಿ ಮೆಕ್ ಕಾನಿ ಎಂಬುವವರು ಸ್ಪೋಟಕ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಯುಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ 22 ವರ್ಷದ ಲೈಲಾನಿ, ಪ್ರಿಯಾಂಕಾ ಚೋಪ್ರಾ ಪರ ಸ್ಪರ್ಧೆಯ ಸಂಘಟಕರು, ಪ್ರಾಯೋಜಕರು ಲಾಬಿ ನಡೆಸಿದ್ದರು. ಸ್ಪರ್ಧೆಗೂ ಮುನ್ನವೇ ಫಲಿತಾಂಶವನ್ನು ನಿರ್ಣಯ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಸ್ಪರ್ಧೆ ಕೇವಲ ನಾಮಕಾವಸ್ಥೆಗೆ ನಡೆದಿದ್ದು, ಬಳಿಕ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಘೋಷಿಸಲಾಯಿತು ಎಂದು ಹೇಳಿರುವ ಅವರು, 1999ರಲ್ಲೂ ಭಾರತದ ಯುಕ್ತಾ ಮುಖಿ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದು, 2000ರಲ್ಲಿ ಅದು ಹೇಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಒಲಿಯಿತು ಎಂಬುದು ಅರ್ಥವಾಗದ ಸಂಗತಿ ಎಂದಿದ್ದಾರೆ.