
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಕಲಾವಿದರು ಸಲ್ಮಾನ್ ಖಾನ್ ಸುರಕ್ಷತೆ ಬಗ್ಗೆ ಪ್ರಾರ್ಥಿಸ್ತಿದ್ದಾರೆ. ಈ ಸಾಲಿಗೆ ನಟಿ ರಾಖಿ ಸಾವಂತ್ ಸೇರಿದ್ದು, ಸಲ್ಮಾನ್ ಖಾನ್ ನನ್ನ ದಂತಕಥೆ ಎಂದು ಕರೆದ ರಾಖಿ ಸಾವಂತ್ ಯಾರೂ ಕೂಡ ಸಲ್ಮಾನ್ ಖಾನ್ ಅವರಿಗೆ ಕೆಟ್ಟದ್ದನ್ನು ಮಾಡುವ ಬಗ್ಗೆ ಯೋಚಿಸಬಾರದು ಎಂದಿದ್ದಾರೆ.
ಪಾಪರಾಜಿಗಳ ಜೊತೆ ಮಾತನಾಡಿದ ರಾಖಿ ಸಾವಂತ್, ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇರುವ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಅದರ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಕೇಳಿದಾಗ, ರಾಖಿ ಸಲ್ಮಾನ್ ಅವರನ್ನು ದಂತಕಥೆ ಎಂದು ಕರೆದರು ಮತ್ತು ಯಾರೂ ಅವರಿಗೆ ಕೆಟ್ಟದ್ದನ್ನು ಮಾಡುವ ಬಗ್ಗೆ ಯೋಚಿಸಬಾರದು ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಪಾಪರಾಜಿ ಖಾತೆಯೊಂದು ಹಂಚಿಕೊಂಡ ವೀಡಿಯೊದಲ್ಲಿ, ಸಲ್ಮಾನ್ ಖಾನ್ ಅವರಿಗಿರುವ ಜೀವಬೆದರಿಕೆ ಬಗ್ಗೆ ಮಾತನಾಡಿದ ರಾಖಿ ಸಾವಂತ್ , ಸಲ್ಮಾನ್ ಖಾನ್ ತುಂಬಾ ಒಳ್ಳೆಯವರು. ಅವರು ಬಡವರಿಗೆ, ಮಕ್ಕಳಿಗೆ ಸಹಾಯ ಮಾಡುತ್ತಾರೆ. ಅವರಿಗೆ ಯಾರೂ ಶತ್ರುಗಳಿಲ್ಲ. ಸಲ್ಮಾನ್ ಭಾಯಿಗೆ ಯಾವುದೇ ತೊಂದರೆಯಾಗದಂತೆ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗಾರ್ಗ್ ಅವರಿಂದ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದು ಗ್ಯಾಂಗ್ ಸದಸ್ಯರ ವಿರುದ್ಧ ಬಾಂದ್ರಾ ಪೊಲೀಸರು ಐಪಿಸಿ ಸೆಕ್ಷನ್ 506(2),120(ಬಿ) ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏತನ್ಮಧ್ಯೆ ಸಲ್ಮಾನ್ ಖಾನ್ ಅವರಿಗೆ Y+ ಭದ್ರತೆಯನ್ನು ಒದಗಿಸಲಾಗಿದೆ.
https://www.youtube.com/watch?v=KcBtGbM3vSw