ನವದೆಹಲಿ: ದೇಶದ ವಿವಿಗಳಲ್ಲಿ ಸ್ನಾತಕೋತರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪಿಜಿ(CUET-PG) ಜೂನ್ 5 ರಿಂದ 12 ರವರೆಗೆ ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಗುರುವಾರ ಮಾಹಿತಿ ನೀಡಿದ್ದು, ಅಭ್ಯರ್ಥಿಗಳು ಮೇ 5 ರವರೆಗೆ ಕ್ಯೂಟ್ ಪಿಜಿ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಏಪ್ರಿಲ್ 19 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಮೇ 5 ರವರೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಅಭ್ಯರ್ಥಿಗಳು ಎನ್.ಟಿ.ಎ. ವೆಬ್ಸೈಟ್ ಗೆ ಭೇಟಿ ನೀಡಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ನೀಟ್ ಯುಜಿ 2023ರ ಪರೀಕ್ಷೆಗೆ 20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಈ ವರ್ಷ 1.4 ಲಕ್ಷ ಎಂಬಿಬಿಎಸ್, ಬಿಡಿಎಸ್ ಸೀಟುಗಳಿಗೆ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿ ಪೂರ್ವ ಪರೀಕ್ಷೆಗಾಗಿ 20,87,445 ಅರ್ಜಿ ಸಲ್ಲಿಕೆಯಾಗಿವೆ. ಮೇ 7 ರಂದು ಪರೀಕ್ಷೆ ನಿಗದಿಯಾಗಿದೆ.