
ಕಾಫಿ ಅಂದ್ರೆ ನನಗೆ ಪಂಚಪ್ರಾಣ ಎನ್ನುವವರಿದ್ದಾರೆ. ಅಂತವರಿಗೆ ಒಂದು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ. ಕಾಫಿ ಕುಡಿಯೋದು ಮಾತ್ರವಲ್ಲ, ಕಾಫಿ ಬಗ್ಗೆ ನೀವು ಸಾಕಷ್ಟು ವಿಷ್ಯಗಳನ್ನು ತಿಳಿದು, ಅದ್ರಲ್ಲಿ ಸ್ನಾತಕೋತ್ತರ ಪದವಿ ಮಾಡಬಹುದು.
ಲಂಚ್ ಬಾಕ್ಸ್ ಸ್ವಚ್ಚತೆಗೆ ಸಿಂಪಲ್ ʼಟಿಪ್ಸ್ʼ
ಯಸ್, ಇಟಲಿಯ ಫ್ಲಾರೆನ್ಸ್ ವಿಶ್ವವಿದ್ಯಾಲಯವು ಕಾಫಿಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಶುರು ಮಾಡ್ತಿದೆ. 9 ತಿಂಗಳ ಕೋರ್ಸ್ ಮೊದಲ ಬ್ಯಾಚ್ ಜನವರಿಯಿಂದ ಆರಂಭವಾಗಲಿದೆ. 24 ವಿದ್ಯಾರ್ಥಿಗಳಿಗೆ ಬ್ಯಾಚ್ ನಲ್ಲಿ ಅವಕಾಶ ನೀಡಲಾಗಿದೆ. ವಿಶ್ವವಿದ್ಯಾನಿಲಯದ ಕೃಷಿ ವಿಭಾಗದ ಮುಖ್ಯಸ್ಥ ಮತ್ತು ಸಂಯೋಜಕರ ಪ್ರಕಾರ, ವ್ಯವಹಾರದ ಅಂಶಗಳು ಸಹ ಕೋರ್ಸ್ನಲ್ಲಿವೆ.
ವಿದ್ಯಾರ್ಥಿಗಳಿಗೆ ಕಾಫಿಯ ಉತ್ಪಾದನೆ ಮತ್ತು ಅದನ್ನು ಜನರಿಗೆ ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ಕಲಿಸಲಾಗುತ್ತದೆ. ಕೋರ್ಸ್ ಮಾಡುವ ವಿದ್ಯಾರ್ಥಿಗಳು ಕಾಫಿಯ ಇತಿಹಾಸ, ರಸಾಯನಶಾಸ್ತ್ರ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರದ ಬಗ್ಗೆ ಓದುತ್ತಾರೆ.
ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ವಿದ್ಯಾರ್ಥಿಗಳಿಗೆ ಕ್ಷೇತ್ರ, ತರಗತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ನೀಡಲಾಗುವುದು. ಇದರೊಂದಿಗೆ ಕಾಫಿ ವ್ಯವಹಾರಕ್ಕೆ ಸಂಬಂಧಿಸಿದ ಕಂಪನಿಗಳಲ್ಲಿ ಇಂಟರ್ನ್ಶಿಪ್ ಕೂಡ ಮಾಡಲಾಗುವುದು. ಸದ್ಯ ಕೋರ್ಸ್ ಇಟಾಲಿಯನ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಇದಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಇಂಗ್ಲೀಷ್ ನಲ್ಲಿ ಕೋರ್ಸ್ ಶುರು ಮಾಡಲು ಆಲೋಚನೆ ಮಾಡಲಾಗಿದೆ. ಪ್ರಪಂಚದಾದ್ಯಂತ,ಇಟಾಲಿಯನ್ ಜನರು ಹೆಚ್ಚು ಕಾಫಿ ಕುಡಿಯುತ್ತಾರೆ. ಇಟಾಲಿಯನ್ನರು ವರ್ಷಕ್ಕೆ ಸರಾಸರಿ 6 ಕೆಜಿ ಕಾಫಿ ಕುಡಿಯುತ್ತಾರೆ.