ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ 2200 ಬೋಧಕರು ಹಾಗೂ ಸಾವಿರಾರು ಬೋಧಕೇತರ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ನೇಮಕಾತಿ ಪ್ರಾಧಿಕಾರದ ಮೂಲಕ ವಿವಿಗಳಲ್ಲಿ ಖಾಲಿ ಇರುವ 2200 ಬೋಧಕರ ಹುದ್ದೆಗಳು ಹಾಗೂ ಸಾವಿರಾರು ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರಾಧಿಕಾರ ನೇಮಕ ಪ್ರಕ್ರಿಯೆ ನಡೆಸಿ ಅರ್ಹತಾ ಪಟ್ಟಿಯನ್ನು ವಿವಿಗೆ ನೀಡಲಿದೆ. ಇವೆಲ್ಲವೂ ಮಂಜೂರಾದ ಹುದ್ದೆಗಳಾಗಿವೆ. ಆರ್ಥಿಕ ಇಲಾಖೆ ಅನುಮತಿ ದೊರೆತ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.