alex Certify ಹುಡುಗನ ಜೊತೆ ಡೇಟಿಂಗ್ ಗೆ ಹೋದವಳ ಸ್ಥಿತಿ ಹೀಗಾಯ್ತು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗನ ಜೊತೆ ಡೇಟಿಂಗ್ ಗೆ ಹೋದವಳ ಸ್ಥಿತಿ ಹೀಗಾಯ್ತು…..!

ಡೇಟಿಂಗ್ ಎಲ್ಲರಿಗೂ ರೋಮಾಂಚನಕಾರಿ ಸಂಗತಿ. ಡೇಟಿಂಗ್ ಸಮಯ ಸದಾ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಸಾಮಾನ್ಯವಾಗಿ ಹುಡುಗನ ಜೊತೆ ಹೋಗುವ ಹುಡುಗಿ ಯಾವಾಗ್ಲೂ ಬಿಲ್ ಪಾವತಿ ಮಾಡುವುದಿಲ್ಲ. ಹುಡುಗಿ ಬಿಲ್ ಹುಡುಗ ಪಾವತಿ ಮಾಡಬೇಕು ಎಂಬುದು ಅಲಿಖಿತ ನಿಯಮ. ಇತ್ತೀಚಿನ ದಿನಗಳಲ್ಲಿ ಅನೇಕ ಹುಡುಗಿಯರು ಈ ನಿಯಮ ಮುರಿದಿದ್ದಾರೆ. ಹುಡುಗನ ತಿಂಡಿ ಬಿಲ್, ಹುಡುಗಿಯರು ಪಾವತಿಸುತ್ತಾರೆ. ಆದ್ರೆ ಹೈಡಿ ಬೇರ್ಬೆರ್ ಬಯಸಿದಂತೆ ಆಗ್ಲಿಲ್ಲ. ಅಲ್ಲಿನ ಘಟನೆಯನ್ನು ಟಿಕ್ ಟಾಕ್ ನಲ್ಲಿ ಹೈಡಿ ಹಂಚಿಕೊಂಡಿದ್ದಾಳೆ.

ಚಿಕ್ಕ ವಿಡಿಯೋ ಮಾಡಿರುವ ಹೈಡಿ, ಡೇಟಿಂಗ್ ಗೆ ಹೋದಾಗ ಏನು ನಡೆಯಿತು ಎಂಬುದನ್ನು ಹೇಳಿದ್ದಾಳೆ. ಹೈಡಿಯೇ, ಹುಡುಗನಿಗೆ ಡೇಟಿಂಗ್ ಆಫರ್ ನೀಡಿದ್ದಳಂತೆ. ಡೇಟಿಂಗ್ ಗೆ ಹೋಗುವ ಸಂದರ್ಭದಲ್ಲಿ ಆಕೆ ಬಳಿ ಹಣವಿರಲಿಲ್ಲವಂತೆ. ಡೇಟಿಂಗ್ ಗೆ ಬಂದ ವ್ಯಕ್ತಿ ಮಾತ್ರ ಅಲ್ಲಿ ವಿಚಿತ್ರವಾಗಿ ನಡೆದುಕೊಂಡಿದ್ದನಂತೆ. ಹೈಡಿಗೆ, ಆಹಾರದ ಆಫರ್ ನೀಡಲೇ ಇಲ್ಲವಂತೆ. ಇದು ತುಂಬ ನೋವು ತಂದಿದೆ ಎಂದು ಹೈಡಿ ಹೇಳಿದ್ದಾಳೆ. ಇದ್ರಲ್ಲಿ ಯಾರದ್ದು ತಪ್ಪು ಎಂದು ಆಕೆ ಪ್ರಶ್ನೆ ಕೂಡ ಮಾಡಿದ್ದಾಳೆ.

ಹೈಡಿ, ಈ ವಿಡಿಯೋ 3.4 ಮಿಲಿಯನ್ ವೀಕ್ಷಣೆ ಪಡೆದಿದೆ. ಇಷ್ಟೇ ಅಲ್ಲ ಹೈಡಿಗೇ ಕೆಲವರು ಬೈದಿದ್ದಾರೆ. ಡೇಟಿಂಗ್ ಗೆ ಬಂದ ಹುಡುಗರೆಲ್ಲ ಆಹಾರ ಆಫರ್ ಮಾಡಬೇಕೆಂದೇನೂ ಇಲ್ಲ. ನೀನು ಡೇಟಿಂಗ್ ಗೆ ಕರೆದ ಮೇಲೆ ಆತ ಬಿಲ್ ನೀಡಬೇಕೆಂಬುದು ಎಷ್ಟು ನ್ಯಾಯ? ನಿನ್ನ ಪರ್ಸ್ ನಲ್ಲಿ ಹಣ ಇಟ್ಟುಕೊಳ್ಳದೆ ಡೇಟಿಂಗ್ ಗೆ ಹೋಗಿದ್ದು ನಿನ್ನ ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...